ಮಂತ್ರವು ದೈವಿಕ ಶಕ್ತಿಯ ಆಧ್ಯಾತ್ಮಿಕ ಕ್ರಿಯೆ: ಶ್ರೀಧರ ಹೊಳ್ಳ

Chandrashekhara Kulamarva
0


ಮಂಗಳೂರು: ಮಂತ್ರವು ದೈವಿಕ ಶಕ್ತಿಯ ಒಂದು ಆಧ್ಯಾತ್ಮಿಕ ಕ್ರಿಯೆ ಎಂದು ಕೂಟ ಮಹಾ ಜಗತ್ತು ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ನುಡಿದರು. ಅವರು ಸಂಸ್ಥೆಯ ವತಿಯಿಂದ ಆಯೋಜಿಸಿದ 20 ದಿನಗಳ ವಸಂತ ವೇದ ಪಾಠ ಶಿಬಿರವನ್ನು ಉದ್ಘಾಟಿಸಿದರು.


ವಿವಿಧ ಯುಗಗಳಲ್ಲಿ ನಮ್ಮ ಋಷಿಮುನಿಗಳು ಕಂಡುಹಿಡಿದ ಪ್ರಾಚೀನ ಸಂಸ್ಕೃತ ಪ್ರಾಸಗಳು ಜಪ ಮಾಡೋ ಮುನ್ನ ಇದನ್ನು ಅರಿತಿರುವವರ ಬಳಿ ಮಹತ್ವವನ್ನು ಹಾಗೂ ವಿಧಿ ವಿಧಾನಗಳನ್ನು ಸರಿಯಾಗಿ ತಿಳಿದುಕೊಂಡು ಶ್ರದ್ಧೆಯಿಂದ ಮಾಡಿದಾಗ ಮಾತ್ರ ಪ್ರತಿಫಲ ಸಿಗುವುದು ಎಂದರು.


ಧ್ಯಾನದಂತೆಯೇ ಜಪವೂ ಒಂದು ಕಾರ್ಯವಿಧಾನವಾಗಿದೆ. ಬ್ರಾಹ್ಮಣರಾದ ನಾವುಗಳು ನಿತ್ಯ ಅನುಷ್ಠಾನ ಮಾಡಿಕೊಂಡು ಇತರರಿಗೆ ಮಾದರಿಯಾಗಿ ಇರಬೇಕು ಎಂದು ಶಿಬಿರದ ಗುರುಗಳಾದ ಶ್ರೀಕರ ಭಟ್ ಕಿವಿಮಾತು ಹೇಳಿದರು.


ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಸ್ವಾಗತಿಸಿ ವಂದಿಸಿದರು. ಮುಖ್ಯ ಅತಿಥಿಗಳಾಗಿ ಅಡ್ವೊಕೇಟ್ ಪ್ರಶಾಂತ್ ರಾವ್, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಮೆನೇಜರ್ ಶಿವರಾಂ ರಾವ್, ಹಿರಿಯರಾದ ಶಿವರಾಮಯ್ಯ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ, ಸದಸ್ಯ ಗಣೇಶ ಪ್ರಸಾದ್ ಕೆ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾ ಎಸ್ ರಾವ್, ಕಾರ್ಯದರ್ಶಿ ಪಂಕಜ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top