ಅಂಬೇಡ್ಕರ್ ಚಿತ್ರ ರಚನೆ ಸ್ಪರ್ಧೆ

Upayuktha
0


ಸುರತ್ಕಲ್: ಯನೆಪೊಯ ಇನ್ಸ್ಟಿಟ್ಯೂಟ್ ಅಫ್ ಅರ್ಟ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಬಲ್ಮಠ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಲುವಾಗಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಚಿತ್ರ ರಚನೆ ಹಮ್ಮಿಕೊಂಡಿತ್ತು.


ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ ಬಹುಮಾನ ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಅಂಬೇಡ್ಕರ್ ಅವರ ಸಾಧನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಚಟುವಟಿಕೆಗಳ ಮಾಹಿತಿ ಪತ್ರ ಮತ್ತು ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.

   

ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಅರುಣ್ ದಾಸ್, ವಿಜಯಲಕ್ಷ್ಮಿ, ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರ್ ಚಿತ್ರಾಪುರ, ಸದಸ್ಯ ಶ್ರೀನಿವಾಸ್ ಪುತ್ರನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಂಜುಳಾ, ಸದಸ್ಯೆ ಶಶಿಕಲಾ, ಹಿರಿಯ ಶಿಕ್ಷಕಿ ಸುಕೇಶಿನಿ, ಸಿಂತಿಯ, ನೀತ ತಂತ್ರಿ ಮತ್ತಿತರರು ಇದ್ದರು.


ಮುಖ್ಯ ಶಿಕ್ಷಕಿ ಶೋಭ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಯ ಕಾರ್ಯದರ್ಶಿ ನಿತೀಶ್ ಮತ್ತು ನಂದನ ಟಿ. ಎಸ್. ಕಾರ್ಯ ಕ್ರಮ ಸಂಯೋಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top