ತಿರುಪತಿ: ಶ್ರೀಕ್ಷೇತ್ರ ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿಯ ಸನ್ನಿಧಿಯಲ್ಲಿ ಬೆಂಗಳೂರಿನ ಮಾನಸಾ ಜಯರಾಜ್ ಅವರು ಗಾಯನ ಸೇವೆ ಕಾರ್ಯಕ್ರಮ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರೀಕ್ಷೇತ್ರ ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿಯ ಸನ್ನಿಧಾನದ ಆವರಣದಲ್ಲಿ ಟಿ ಟಿ ಡಿ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿ ಡಾ|| ಆನಂದತೀರ್ಥಾಚಾರ್ ಪಗಡಾಲ ಅವರು ಮಾನಸಾ ಜಯರಾಜ್ ಅವರಿಗೆ ಏಪ್ರಿಲ್ 21, ಸೋಮವಾರದಂದು ಸಹಸ್ರ ದೀಪಾಲಂಕಾರಣ ಸೇವೆಯ ವೇಳೆ ಗಾಯನ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದರು.
ಮಾನಸಾ ಜಯರಾಜ್ ಅವರು ಸುಮಧುರ ಕಂಠದಿಂದ ದೇವರನಾಮ ಪ್ರಸ್ತುತಪಡಿಸಿ, ಭಕ್ತಿ ಸಮರ್ಪಿಸಿದರು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಯಲ್ಲಿ ಮಿಂದೆದ್ದರು. ಮಾನಸಾ ಜಯರಾಜ್ ಅವರು ಆಕಾಶವಾಣಿ ಕಲಾವಿದೆಯಾಗಿದ್ದು ಇವರು ಸುಮಾರು150ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ ಈ ಕಲಾವಿದೆ ಹಲವಾರು ಸಿಡಿಗಳಲ್ಲೂ ಹಾಡಿದ್ದಾರೆ.ಇವರ ಊಂಜಲ್ ಸಂಗೀತ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಶ್ರೀ ಕೆ. ಕುಪ್ಪುಸ್ವಾಮಿ, ತಬಲಾ ವಾದನದಲ್ಲಿ ಶ್ರೀ ವಿ. ಜಗನ್ಮೋಹನ್ ಸಾಥ್ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ