ಹಿಡಿಯಲ್ಲಿ ಇಡಿಯನ್ನು ತೋರಿಸುವ ಶಕ್ತಿ ಚುಟುಕಿಗಿದೆ: ಒಡ್ಡಂಬೆಟ್ಟು

Upayuktha
0


ಕಾಸರಗೋಡು: ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ಚುಟುಕು ಸಾಹಿತ್ಯ ಈಗ ಬಹಳಷ್ಟು ಪ್ರಸಿದ್ಧಿ ಪಡೆಯುತ್ತಾ ಇದೆ. ಹಿಡಿಯಲ್ಲಿ ಇಡಿಯನ್ನು ತೋರಿಸುವ ಶಕ್ತಿ ಚುಟುಕಿಗಿರುವುದೇ ಇದಕ್ಕೆ ಕಾರಣವಾಗಿದೆ. ಸತ್ವ ತತ್ವಗಳನ್ನು ಒಳಗೊಂಡ ಧ್ವನಿ ಪೂರ್ಣವಾದ ಗಟ್ಟಿ ಚುಟುಕುಗಳಿಗೆ  ಓದುಗರ ಮನದಲ್ಲಿ ಉಳಿಯುವ ತಾಕತ್ತು ಯಾವತ್ತಿಗೂ ಇರುತ್ತದೆ ಎಂದು ಶಿಕ್ಷಕ, ತುಳು, ಕನ್ನಡ ಕವಿ ಹರೀಶ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯ ಪಟ್ಟರು.


ಅವರು ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಸಂಭ್ರಮವು ತಾರೀಕು ಮಾ.27ರಂದು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರುವ ಮೂಲಕ ಪ್ರಾರಂಭಗೊಂಡು ಸುಮಾರು 108 ಕವಿಗಳ ಚುಟುಕು ಕವಿಗೋಷ್ಠಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹು ವಿಜೃಂಭಣೆಯಿಂದ ನಡೆಯಿತು.


ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಂಚಾಲಕರಾದಂತಹ ಡಾ| ಎಂಜಿಆರ್ ಅರಸ್ ಅವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾಸರಗೋಡು ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ಕಾಸರಗೋಡು ನಗರ ನಗರಸಭೆಯ ವಾರ್ಡ್ ಮೆಂಬರ್  ಬಿ. ಶಾರದ, ದಯಾಸಾಗರ್ ಚೌಟ, ಕವಿಗೋಷ್ಟಿ ಅಧ್ಯಕ್ಷತೆ ವಹಿಸಿದ ಡಾ.ಸುರೇಶ ನೆಗಳಗುಳಿ ಮತ್ತೂ ಅನೇಕರು ಉಪಸ್ಥಿತರಿದ್ದರು.


ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರೀಯವರು ಧನ್ಯವಾದ ಸಮರ್ಪಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top