ಬೆಂಗಳೂರು: ವಿದ್ಯಾರಣ್ಯಪುರದ ಶ್ರೀರಾಮ ಭಕ್ತ ಸಭಾ ವತಿಯಿಂದ 119ನೇ ವರ್ಷದ ಶ್ರೀ ರಾಮೋತ್ಸವವನ್ನು ಮಲ್ಲೇಶ್ವರದ 5ನೇ ಅಡ್ಡರಸ್ತೆಯಲ್ಲಿರುವ ಶ್ರೀ ಶ್ರೀಕಂಠೇಶ್ವರ ಭವನದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 7ರ ವರೆಗೆ ಹಮ್ಮಿಕೊಂಡಿದ್ದು. ಇದರ ಅಂಗವಾಗಿ ಮಾರ್ಚ್ 31ರಂದು ಸಂಜೆಯ ಕಾರ್ಯಕ್ರಮದಲ್ಲಿ ಮ||ಶಾ||ಸಂ|| ಶ್ರೀ ಕಲ್ಲಾಪರ ಪವಮಾನಾಚಾರ್ಯರು "ನಳೋಪಾಖ್ಯಾನ" ವಿಷಯವಾಗಿ ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.
ನಂತರ 'ಯುವ ಪ್ರತಿಭೆ' ವಿ|| ಕು|| ರಚನಾ ಶರ್ಮಾ ಸಂಗೀತ-ದಾಸವಾಣಿ ಪ್ರಸ್ತುತಪಡಿಸಿದರು. ಇವರ ಗಾಯನಕ್ಕೆ ವಿ|| ಸೀತಾರಾಮ್ ಗೋಪಿನಾಥ್ (ವಯೋಲಿನ್), ವಿ|| ಮುರಳಿ ನಾರಾಯಣರಾವ್ (ಮೃದಂಗ) ಮತ್ತು ವಿ|| ಸಚಿನ್ ದೇವಿಪ್ರಸಾದ್ (ಘಟ) ಪಕ್ಕವಾದ್ಯಗಳಲ್ಲಿ ಸಾಥ್ ನೀಡಿದರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ