ಅಧಿಕಾರಿಗಳು ಸ್ಪಂದಿಸದಿದ್ದರೆ ಜೈಲಿನ ಜಾಮರ್ ಕಿತ್ತು ಬಿಸಾಕುತ್ತೇವೆ: ಶಾಸಕ ಕಾಮತ್ ಎಚ್ಚರಿಕೆ

Upayuktha
0


ಮಂಗಳೂರು: ಮಂಗಳೂರಿನ ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್‌ನಿಂದಾಗಿ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದ್ದು ಸಂಬಂಧಪಟ್ಟವರು ನಮ್ಮ ಯಾವುದೇ ಮನವಿಗೂ ಸ್ಪಂದಿಸುತ್ತಿಲ್ಲ.


ಹಾಗಾಗಿ, ಏಪ್ರಿಲ್ 3 ರ ರೊಳಗೆ ಜೈಲಿನ ಜಾಮರ್‌ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಏಪ್ರಿಲ್ 4 ನೇ ತಾರೀಕಿನಂದು ಸಾರ್ವಜನಿಕರ ಪರವಾಗಿ ಬಿಜೆಪಿ ಕಾರ್ಯಕರ್ತರೆಲ್ಲರೂ ಸೇರಿಕೊಂಡು ರಾಸ್ತಾ ರೋಕೋ ನಡೆಸಿ, ಜೈಲಿನೊಳಗೆ ನುಗ್ಗಿ ಜಾಮರ್ ಕಿತ್ತು ಬಿಸಾಕಬೇಕಾಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ಜೈಲಿಗೆ ಜಾಮರ್ ಅವಶ್ಯಕತೆ ಏನಿದೆ? ಅಧಿಕಾರಿಗಳ ಕೈವಾಡ ಇಲ್ಲದಿದ್ದರೆ ಜೈಲಿನೊಳಗೆ ಇರುವ ಕ್ರಿಮಿನಲ್‌ ಗಳಿಗೆ ಮೊಬೈಲ್‌ ಗಳು ತಲುಪುವುದು ಹೇಗೆ? ಜೈಲಿನ ಒಳಗಿರುವ ಅಪರಾಧಿಗಳನ್ನು ಬಳಸಿಕೊಂಡು ಮಾದಕ ದ್ರವ್ಯದ ದಂಧೆ ಹಾಗೂ ಇತರ ಘೋರ ಅಪರಾಧ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಲಾಗಿದೆ ಎಂದು ಶಾಸಕ ಕಾಮತ್ ಆರೋಪಿಸಿದರು.


ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿ ಇದು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top