ಎರಡನೇ ದಿನದ ಶಿಬಿರದ ವಿಷಯಗಳು: ವೃತ್ತಿ ಜೀವನದ ರೂಪಿಸಿಕೊಳ್ಳುವಿಕೆ, ಡಿಜಿಟಲ್ ಪ್ರಪಂಚದ ರಕ್ಷಕರು

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ಯುರೇಕಾ 2025ರ ಎರಡನೇ ದಿನದ ಪ್ರಥಮ ಅವಧಿಯನ್ನು ನಾಗಶ್ರೀ ಐತಾಳ್, ಸಮಾಲೋಚಕರು ಕೋಚಿಂಗ್ ಮತ್ತು ಕೌನ್ಸಿಲಿಂಗ್ ಸೆಂಟರ್ ಬೊಳುವಾರ್ ನಡೆಸಿಕೊಟ್ಟರು.
" Crafting your dream career" ವಿಷಯದ ಕುರಿತು ಮಾತನಾಡಿದ ಅವರು, “ವೃತ್ತಿ ಎಂದರೇನು? ಒಬ್ಬ ಮಾನವನ ಜೀವನದಲ್ಲಿ ವೃತ್ತಿ ಏಕೆ ಮುಖ್ಯವಾಗುತ್ತದೆ? ವೃತ್ತಿ ಜೀವನವನ್ನು ಸರಳವಾಗಿ ಪ್ರಾರಂಭಿಸುವುದು ಹೇಗೆ? ವೃತ್ತಿ ಎಂದರೆ ಕೇವಲ ಹೊಟ್ಟೆಪಾಡಿಗಾಗಿ ನಡೆಸುವ, ಹಣ ಗಳಿಸುವ ಮಾರ್ಗವೇ? ವೃತ್ತಿ ಜೀವನದಲ್ಲಿ ಬೆಳೆಸಿಕೊಳ್ಳಬೇಕಾದ ಜೀವನ ಕೌಶಲ್ಯಗಳೇನು? ಜೀವನದಲ್ಲಿ ಗೆಲುವಿರುವುದು ಶಿಸ್ತುಬದ್ಧವಾದ ಯೋಜನೆಯನ್ನು ಅಳವಡಿಸಿಕೊಳ್ಳುವುದರಲ್ಲಿ” ಈ ಮುಂತಾದ ವಿಚಾರಗಳ ಕುರಿತಾಗಿ ಮಾರ್ಗದರ್ಶನ ನೀಡಿದರು.
ಬಳಿಕ ನಡೆದ ಎರಡನೇ ಅವಧಿಯಲ್ಲಿ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ, ಪುತ್ತೂರು ಇಲ್ಲಿಯ AIML ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಜಯ್ ಶಾಸ್ತ್ರಿ ಇವರು "Guardians of digital world" ವಿಷಯದ ಕುರಿತಾಗಿ ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸಿ ಡಿಜಿಟಲ್ ಪ್ರಪಂಚದಲ್ಲಿ ನಾವು ಏನು ಮಾಡುತ್ತಿದ್ದೇವೆ? ಹೇಗೆ ಬೇರೆಯವರೊಂದಿಗೆ ಸಂವಹನ ನಡೆಸುತ್ತಿದ್ದೇವೆ? ಡಿಜಿಟಲ್ ಪ್ರಪಂಚದಲ್ಲಿ ನಾವು ಹೇಗೆ ಮೋಸ ಹೋಗುತ್ತಿದ್ದೇವೆ? ನಮ್ಮ ವೈಯಕ್ತಿಕ ಮಾಹಿತಿಗಳು ಹೇಗೆ ಸೋರಿಕೆಯಾಗುತ್ತಿವೆ? ಕೃತಕ ಬುದ್ಧಿಮತ್ತೆ ಇಲ್ಲಿ ಹೇಗೆ ಕಾರ್ಯವೆಸಗುತ್ತವೆ? ಈ ಮೊದಲಾದ ವಿಷಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಅಪರಾಹ್ನದ ಬಳಿಕ ವಿದ್ಯಾರ್ಥಿಗಳಿಗಾಗಿ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ವಿವೇಕಾನಂದ ಪದವಿಪೂರ್ವಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕ ವೃಂದದವರು ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ