ಶ್ರೀ ಪುತ್ತಿಗೆ ಮಠದಲ್ಲಿ ವಸಂತ ಧಾರ್ಮಿಕ ಶಿಬಿರ

Upayuktha
0



ಬೆಂಗಳೂರು :  ಬಸವನಗುಡಿಯ ರಸ್ತೆಯಲ್ಲಿರುವ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಉಭಯ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 7 ರಿಂದ 16ರ ವರೆಗೆ ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಸಂತ ಧಾರ್ಮಿಕ ಶಿಬಿರವನ್ನು ವೇದ ಘೋಷ ಹಾಗೂ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. 


ಈ  ಕಾರ್ಯಕ್ರಮದಲ್ಲಿ ರಘೋತ್ತಮ ಬಿದ್ರಹಳ್ಳಿ, ಪಿ ಎಸ್ ಆಚಾರ್ಯ, ಸುನಿಲ್ ಆಚಾರ್ಯ, ವಾದಿರಾಜ ವೈಲಾಯ, ಪ್ರತಿಮ  ಉಡುಪ, ಶಿಬಿರಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಈ ಸಮಯದಲ್ಲಿ 1೦೦ ಕೋಟಿ ಗೀತಾ ಲೇಖನ ಪುಸ್ತಕಗಳನ್ನು ವಿತರಿಸಲಾಯಿತು.


ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸ್ತೋತ್ರ ಪಾಠ, ರಂಗೋಲಿ, ವೇದ ಮಂತ್ರಗಳು, ಸಂಧ್ಯಾವಂದನೆ, ದೇವ ಪೂಜಾ, ಹೂ ಕಟ್ಟುವುದು, ದ್ವಾದಶ ಸ್ತೋತ್ರ, ಭಗವದ್ಗೀತೆಯ ಕೆಲವು ಆಯ್ದ ಶ್ಲೋಕಗಳು, ದಾಸರ ಪದಗಳು, ಸಂಕೀರ್ತನೆ, ಸರಳ ಸಂಸ್ಕೃತ, ನಮ್ಮ ಆಚಾರ ವಿಚಾರಗಳು, ಪಂಚಾಂಗ, ಮುಂತಾದ ಶೀರ್ಷಿಕೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡಲಾಗುವುದು ಹಾಗೂ ಮುಂತಾದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top