ದಾವಣಗೆರೆ: ಇಲ್ಲಿನ ಶ್ರೀ ಚಂಡಿಕಾಶ್ರಮದ ಓಂ ಚಂಡಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಏಪ್ರಿಲ್ 13 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಹೊಸ ನಿಲ್ದಾಣದ ಹಿಂಭಾಗ ಭಗತ್‌ಸಿಂಗ್ ನಗರದ ಶ್ರೀ ಚಂಡಿಕಾಶ್ರಮದ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ಮಧುಮೇಹ ನಿರ್ಮೂಲನ ಅಂದೋಲನ ಕಾರ್ಯಾಗಾರ ಉದ್ಘಾಟನೆಯಾಗಲಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೌಶಲ್ಯ ಬಾಯಿ ಎನ್. ತಿಳಿಸಿದ್ದಾರೆ.
ಉದ್ಘಾಟನೆಯನ್ನು ಶ್ರೀ ಗಾಯತ್ರಿ ಪರಿವಾರದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಟ್ರಸ್ಟ್ ಅಧ್ಯಕ್ಷರೂ, ಸಂಸ್ಥಾಪಕರಾದ ಅಘೋರಿ ಚಿದಂಬರ ಯೋಗಿಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರದ ವಿಮೋಚನಾ ಕಿವುಡ, ಮೂಗರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಕಲಾಕುಂಚ ಸಿದ್ಧವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ದಾವಣಗೆರೆಯ ಡಿ.ಸಿ.ಎಂ.ಟೌನ್‌ಶಿಪ್ ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ ಆಗಮಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಕಾರ್ಯಾಗಾರ ಯಶಸ್ವಿಗೊಳಿಸಬೇಕಾಗಿ ಟ್ರಸ್ಟ್ ಸಮಿತಿಯವರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9380389236 ಈ ವ್ಯಾಟ್ಸಪ್ ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ