ಚಿಕ್ಕಬಳ್ಳಾಪುರ: 8 ಶಾಲೆಗಳಲ್ಲಿ ಇಂಗ್ಲೀಷ್ ಕರ್ಸಿವ್ ಬರವಣಿಗೆ ಸ್ಪರ್ಧೆ ಸಂಪನ್ನ

Upayuktha
0


ಚಿಕ್ಕಬಳ್ಳಾಪುರ: ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಟ್ರಸ್ಟ್ ಬೆಂಗಳೂರು ವತಿಯಿಂದ 14 ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುತ್ತಿರುವ "ಇಂಗ್ಲೀಷ್ ಕರ್ಸಿವ್ ಬರವಣಿಗೆ ಸ್ಪರ್ಧಾ ಪರೀಕ್ಷೆ"ಯನ್ನು ("English cursive handwriting Competition Test) ಗುರುವಾರ (ಮಾ.3) ಭಾವೈಕ್ಯ ಯುವಜನ ಸಂಘದ ವತಿಯಿಂದ ಒಟ್ಟು 8 ಶಾಲೆಗಳಲ್ಲಿ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಯಶಸ್ವಿಯಾಗಿ ಮಾಡಲಾಯಿತು.


ಭಾವೈಕ್ಯ ಯುವಜನ ಸಂಘದ ವ್ಯವಸ್ಥಾಪಕ ಪ್ರಜ್ವಲ್ ಕೆ.ವಿ.ಸಿ, ಖಜಾಂಚಿ ಸಂತೋಷ್ ಹಾಗೂ ಗ್ರಾಮಾಂತರ ಟ್ರಸ್ಟ್ ನ ಇಂಟರ್ನ್ಶಿಪ್ ವಿದ್ಯಾರ್ಥಿಗಳಾದ ನೇಹ, ವೈಷ್ಣವಿ, ಪ್ರತೀಕ್ಷ, ಭಾನುಪ್ರಿಯ, ಪವಿತ್ರ, ಯಶಸ್ವಿನಿ, ಚೈತ್ರ, ದರ್ಶನ್ ಮತ್ತು ಸ್ವಯಂ ಸೇವಕಿ ಶಾಲಿನಿ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಟ್ಟತಿಮ್ಮನಹಳ್ಳಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಮ್ಮನಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳಹಳ್ಳಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೌಡನಹಳ್ಳಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಮ್ಮನಹಳ್ಳಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣಿತಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುತ್ತೂರು ಮತ್ತು ದೇವನಹಳ್ಳಿ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿ ಎನ್ ಹೊಸೂರುಗಳಲ್ಲಿ ಈ ಶಿಬಿರ ನಡೆಸಿಕೊಟ್ಟರು.


ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಇಂಗ್ಲಿಷ್ ಬರವಣಿಗೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2022-23 ನೇ ಸಾಲಿನಲ್ಲಿ "ಇಂಗ್ಲೀಷ್ ಕರ್ಸಿವ್ ಡ್ರೈವ್ ಸ್ಕೀಮ್" ಯೋಜನೆಯನ್ನು ರೂಪಿಸಲಾಗಿದೆ. ಇಂಗ್ಲೀಷ್ ಕರ್ಸಿವ್ ಕಾಪಿ ಬರವಣಿಗೆ ಪುಸ್ತಕಗಳನ್ನು ನೀಡಿ ಬರೆಸಿ ಶಾಲಾ ಹಾಗೂ ತರಗತಿ ಮಟ್ಟದಲ್ಲಿ ಸ್ಪರ್ಧೆಯನ್ನು ಮಾಡಲಾಗುತ್ತದೆ.


ಈ ಸ್ಪರ್ಧೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆ, ದೇವನಹಳ್ಳಿ ತಾಲೂಕು, ಶಿಡ್ಲಘಟ್ಟ ತಾಲೂಕು ಮತ್ತು ಹೊಸಕೋಟೆ ತಾಲೂಕಿನಾದ್ಯಂತ ಒಟ್ಟು 14 ಸರ್ಕಾರಿ ಶಾಲೆಗಳಲ್ಲಿ "ಇಂಗ್ಲೀಷ್ ಕರ್ಸಿವ್ ಕಾಪಿ ಬರವಣಿಗೆ ಪುಸ್ತಕ"ಗಳನ್ನು ನ.20ರಂದು ನೀಡಲಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top