ಕೊಚ್ಚಿಯಲ್ಲಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ವೀಣಾ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ ಈ ಅನುಮತಿ ಬಂದಿದೆ.
ಎಸ್‌ಎಫ್‌ಐಒ ವರದಿ ಪ್ರಕಾರ ವೀಣಾ ಮತ್ತು ಅವರ ಬೆಂಗಳೂರಿನಲ್ಲಿರುವ ಸಂಸ್ಥೆಯಾದ ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಐಟಿ ದಾಖಲೆಗಳನ್ನು ನೀಡದೆ ಸಿಎಂಆರ್‌ಎಲ್ ನಿಂದ 2.73 ಕೋಟಿ ರೂ ಪಡೆದಿವೆ. ಆದರೆ ಈ ಪಾವತಿ ಮೋಸದ್ದು ಮತ್ತು ನ್ಯಾಯಸಮ್ಮತವಲ್ಲ ಎಂದು ಎಸ್‌ಎಫ್‌ಐಒ ಹೇಳಿದೆ.
2017 ಮತ್ತು 2020 ರ ನಡುವೆ ಎಕ್ಸಾಲಾಜಿಕ್ ಸಿಎಂಆರ್‌ಎಲ್ ನಿಂದ 1.72 ಕೋಟಿ ರೂ. ಪಡೆದಿದೆ ಎಂದು ವರದಿಯಾಗಿತ್ತು. ಆಗಸ್ಟ್ 8, 2023 ರಂದು ಈ ಅವ್ಯವಹಾರ ಮೊದಲು ಬಹಿರಂಗಗೊಂಡು ಕೇಂದ್ರ ಸರ್ಕಾರವು ವಿವರವಾದ ತನಿಖೆ ನಡೆಸುವಂತೆ ಎಸ್‌ಎಫ್‌ಐಒ ಗೆ ನಿರ್ದೇಶನ ನೀಡಿತ್ತು. ಇದೀಗ 160 ಪುಟಗಳ ಪ್ರಾಸಿಕ್ಯೂಷನ್ ದೂರಿನಲ್ಲಿ ಎಸ್‌ಎಫ್‌ಐಒ ವೀಣಾ, ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಮತ್ತು ಇತರ 25 ಜನರನ್ನು ಆರೋಪಿಗಳೆಂದು ಉಲ್ಲೇಖಿಸಿದೆ. ಸಿಎಂಆರ್‌ಎಲ್, ಎಕ್ಸಲಾಜಿಕ್ ಸೊಲ್ಯೂಷನ್ಸ್ ಮತ್ತು ಅಂಗಸಂಸ್ಥೆ ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ಸ್ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಆರೋಪ ಪಟ್ಟಿಯಲ್ಲಿ ನಮೂದಿಸಿದೆ. ವೀಣಾ ಅಂಗಸಂಸ್ಥೆ ಸಂಸ್ಥೆಯಿಂದ ಹಣ ದುರುಪಯೋಗಪಡಿಸಿ ಕೊಂಡಿದ್ದಾರೆ ಎಂದು ಹೇಳಿದೆ.
ಅಪರಾಧ ಸಾಬೀತಾದರೆ ವೀಣಾ ಮತ್ತು ಇತರ ಆರೋಪಿಗಳಿಗೆ 2013 ರ ಕಂಪನಿ ಕಾಯ್ದೆಯಡಿ ಆರು ತಿಂಗಳಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಆಗಲಿದೆ. ಈ ಶಿಕ್ಷೆಯ ಜೊತೆಗೆ ಅಕ್ರಮವಾಗಿ ಸಂಗ್ರಹಿಸಿದ ಮೊತ್ತದ ಮೂರು ಪಟ್ಟು ದಂಡ ಕಟ್ಟಬೇಕಾಗುತ್ತದೆ.
ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ರದ್ದುಗೊಳಿಸಲು ವಾದ ನಡೆಯುತ್ತಿದೆ. ವಾದವನ್ನು ಆಲಿಸಿದ ನ್ಯಾಯಾಧೀಶರನ್ನು ಅಲಹಾಬಾದ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಜುಲೈನಲ್ಲಿ ವಿಸ್ತಾರವಾದ ವಾದವನ್ನು ಆಲಿಸಲು ನಿರ್ಧರಿಸಿರುವಾಗ ಈಗ ಎಸ್ಎಫ್ಐಒ ಈ ನಾಟಕವನ್ನು ಆಡುತ್ತಿದೆ. ಇದು ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ ಎಂದು ಸಿಪಿಎಂ ಮುಖಂಡರು ಆರೋಪಿಸಿದ್ದಾರೆ. ಪ್ರಕರಣದಲ್ಲಿ. ಮೂರು ನ್ಯಾಯಾಲಯಗಳು ಮುಖ್ಯಮಂತ್ರಿಯವರನ್ನು ಭ್ರಷ್ಟಾಚಾರದಲ್ಲಿ ಸಿಲುಕಿಸಲು ಏನನ್ನೂ ಕಂಡುಹಿಡಿಯಲಿಲ್ಲ ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ