ಮಂಗಳೂರು: ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ತುಳುಕೂಟ (ರಿ) ಕುಡ್ಲದ ವತಿಯಿಂದ ತುಳುವರ ವಿಶೇಷವಾದ ಬಿಸು ಪರ್ಬದ ಆಚರಣೆಯನ್ನು ವಿಷುವಿನ ದಿನದಂದು ನಡೆಸಲಿದೆ. ವಿಶೇಷ ಕಣಿ ದರ್ಶನದ ವ್ಯವಸ್ಥೆಯೂ ಇರಲಿದೆ. ಸಭಾ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ||ತುಕಾರಾಂ ಪೂಜಾರಿ ಹಾಗೂ ಸಾಹಿತಿ ತುಳು ವಿದ್ವಾಂಸ ಮುದ್ದು ಮೂಡುಬೆಳ್ಳೆ ಬಿಸುವಿನ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಂಗಳಾದೇವಿ ಕ್ಷೇತ್ರದ ಮೊಕ್ತೇಸರರಾದ ಅರುಣ್ ಐತಾಳ್ ರು ದೀಪಪ್ರಜ್ವಲನೆ ಮಾಡಲಿದ್ದಾರೆ. ಶ್ರೀಮತಿ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷರಾಗಿ ಉದ್ಯಮಿ ಭಾಸ್ಕರ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರತ್ನವರ್ಮ ಹೆಗ್ಗಡೆ ಅಪ್ರಕಟಿತ ನಾಟಕ ಕೃತಿಗಳ ವಿಜೇತರಿಗೆ ಪ್ರಶಸ್ತಿ ವಿತರಣೆಯೂ ನಡೆಯಲಿದೆ ಸಭಾ ಕಾರ್ಯಕ್ರಮದ ಬಳಿಕ ಬಿಸುಪರ್ಬದ ವಿಶೇಷತೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತುಳುಕೂಟದ ಸದಸ್ಯರು ನಡೆಸಿಕೊಡಲಿದ್ದಾರೆ ಎಂದು ತುಳುಕೂಟದ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪುರಸ್ಕೃತರು:
ಶಶಿರಾಜ್ ರಾವ್, ಕಾವೂರು -ಪ್ರಥಮ
ಅಕ್ಷತಾ ರಾಜ್ ಪೆರ್ಲ - ದ್ವಿತೀಯ
ಗೀತಾ ನವೀನ್- ತೃತೀಯ
ಪ್ರೋತ್ಸಾಹಕ ಬಹುಮಾನವನ್ನು ವಿಲಾಸ್ ಕುಮಾರ್ ನಿಟ್ಟೆ ಹಾಗೂ ಪ್ರಕಾಶ್ ಕುಮಾರ್ ಬಗಂಬಿಲ ಪಡೆದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ