ಬಳ್ಳಾರಿ: ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ (ಬೆಸ್ಟ್) ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇದರಲ್ಲಿ 172 ಡಿಸ್ಟಿಂಕ್ಷನ್, 272 ಪ್ರಥಮ ದರ್ಜೆ ಮತ್ತು 60-ದ್ವಿತೀಯ ದರ್ಜೆ ಹೊಂದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಜೈ ಕಿಶನ್ ಪಾಟೀಲ್-581/600, ಲಿಕಿತಾ ಬಿ,- 580/600, ಬಿ.ಶ್ರೇಯ-577/600, ಧೀರಜ್-575/600, ಮಾಹಿರ್-575/600, ಸಾಯಿ ಹರ್ಷಿತ-571/600, ಪವನ್ ಕುಮಾರ್-570/600 , ಹಾಗೂ ವಾಣಿಜ್ಯ ವಿಭಾಗದಲ್ಲಿ ಎಸ್. ಸಹನಾ-581/600, ಮಧು-560/600 ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡು ಅತ್ಯುತ್ತಮ ಪ್ರತಿಭೆ ತೋರಿಸಿದ್ದಾರೆ, ಗಣಕ ವಿಜ್ಞಾನದಲ್ಲಿ ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ-09, ಭೌತಶಾಸ್ತ್ರದಲ್ಲಿ-03, ಕನ್ನಡದಲ್ಲಿ-05, ಲೆಕ್ಕಶಾಸ್ತ್ರದಲ್ಲಿ-02, ವ್ಯವಹಾರ ಅಧ್ಯಯನ-03 ಇಷ್ಟು ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್ ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೋನಂಕಿ ರಾಮಪ್ಪನವರು ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್‌ಕುಮಾರ್, ಕಾರ್ಯದರ್ಶಿಗಳಾದ ಮನ್ನೆ ಶ್ರೀನಿವಾಸುಲು, ಕಾಲೇಜು ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರಾದ ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ