ಬಳ್ಳಾರಿ: ಶ್ರೀ ಅಭಯ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ (ರಿ), 4ನೇ ಕ್ರಾಸ್ (ಪಶ್ಚಿಮ), ವಿದ್ಯಾನಗರ, ಬಳ್ಳಾರಿಯಲ್ಲಿ ಶ್ರೀರಾಮನವಮಿ ಹಬ್ಬದ ಅಂಗವಾಗಿ ಸೀತಾರಾಮ ಕಲ್ಯಾಣ ಮಹೋತ್ಸವ ಮತ್ತು ರಥೋತ್ಸವ, 5ನೇ ವಾರ್ಷಿಕೋತ್ಸವವನ್ನು ದಿನಾಂಕ 06-04-2025 ಭಾನುವಾರ ಆಯೋಜಿಸಲಾಗಿದೆ.
ಸ್ವಸ್ತಿಶ್ರೀ ಶಾಲಿವಾಹನ ಶಕ 1947ನೇ ಶ್ರೀ ವಿಶ್ವಾವಸುನಾಮ ಸಂವತ್ಸರ ಚೈತ್ರಮಾಸ ಶುಕ್ಲಪಕ್ಷ ನವಮಿ ದಿನಾಂಕ : 06-04-2025 ಭಾನುವಾರ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಸೀತಾರಾಮ ಕಲ್ಯಾಣ ಮಹೋತ್ಸವ, ಮಧ್ಯಾಹ್ನ 1.00 ಗಂಟೆಯಿಂದ ಅನ್ನಸಂತರ್ಪಣಾ ಕಾರ್ಯಕ್ರಮ ಮತ್ತು ಸಂಜೆ 4.30 ಗಂಟೆಯಿಂದ ಶ್ರೀ ಸೀತಾರಾಮಾಂಜನೇಯಸ್ವಾಮಿ ರವರ ರಥೋತ್ಸವವನ್ನು ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು.
ಕಾರಣ ಸಕಲ ಭಕ್ತಾಧಿಗಳು ದೇವಸ್ಥಾನಕ್ಕೆ ಸಪರಿವಾರ ಸಮೇತರಾಗಿ ಆಗಮಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ. ಸೀತಾ ರಾಮಾಂಜನೇಯಸ್ವಾಮಿರವರ ಕೃಪೆಗೆ ಪಾತ್ರರಾಗಬೇಕೆಂದು ಅಭಯ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ (ರಿ) ಪದಾಧಿಕಾರಿಗಳು ಮತ್ತು ಬೋಯಪಾಟಿ ವಿಷ್ಣುವರ್ಧನ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ