ಅಂಬಿಕಾ ಪದವಿ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾ ದಿನ

Upayuktha
0



ಪುತ್ತೂರು: ಕ್ರೀಡೆಯನ್ನು ಕೇವಲ ಮೋಜು ಎಂಬಂತರ ಸ್ವೀಕರಿಸದೆ ನಮ್ಮ ದೇಹದಾರ್ಡ್ಯತೆಯನ್ನು ಸಮೃದ್ಧಗೊಳಿಸುವ ವ್ಯವಸ್ಥೆ ಯಾಗಿ ಗುರುತಿಸಬೇಕು. ಯುವ ಸಮೂಹ ಆರೋಗ್ಯವಂತರಾಗಿ ಮೂಡಿಬರುವಲ್ಲಿ ಕ್ರೀಡೆ ಮಹತ್ವ ಪಡೆಯುತ್ತದೆ. ನಮ್ಮ ದೇಹಾರೋಗ್ಯ ದೇಶಕ್ಕೆ ಉಪಯೋಗ ಆಗುವ ನೆಲೆಯಲ್ಲಿ ವಿನಿಯೋಗಗೊಳ್ಳಬೇಕು. ದೇಶಕ್ಕಾಗಿ ನಾವು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಒಡಮೂಡಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವತಿಯಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಆವರಣದ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕ ಕ್ರೀಡಾ ದಿನವನ್ನು ಉದ್ಘಾಟಿಸಿ  ಮಾತನಾಡಿದರು.


ಯುವಶಕ್ತಿ ದೇಶದ ಬಗೆಗೆ ಆಲೋಚನೆ ನಡೆಸಬೇಕು. ನಮ್ಮ ಬದುಕನ್ನು ದೇಶಕ್ಕಾಗಿ ಮುಡಿಪಿಡುವ ನೆಲೆಯಲ್ಲಿ ಕಾರ್ಯತತ್ಪರ ರಾಗಬೇಕು. ವಿವಿಧ ದೈಹಿಕ ಕಸರತ್ತುಗಳ ಮೂಲಕ ನಮ್ಮನ್ನು ನಾವು ಆರೋಗ್ಯಪೂರ್ಣರಾಗಿ ಇಟ್ಟುಕೊಂಡಾ ಗಲಷ್ಟೇ ದೇಶಕ್ಕೆ ನಮ್ಮಿಂದ ಕೊಡುಗೆ ಕೊಡುವುದಕ್ಕೆ ಸಾಧ್ಯ. ಆದ್ದರಿಂದ ಕ್ರೀಡಾದಿನವನ್ನು ಕೇವಲ ಒಂದು ಮನರಂಜನೆಯ ದಿನವಾಗಿ ಕಾಣದೆ ನಮ್ಮನ್ನು ನಾವು ಸಮರ್ಥರನ್ನಾಗಿಸುವ ಅವಕಾಶವಾಗಿ ಕಾಣಬೇಕು ಎಂದು ಕರೆಕೊಟ್ಟರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ., ಅಂಬಿಕಾ ಪದವಿ ಮಹಾವಿದ್ಯಾಲಯ  ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಕ್ಷಿತ್ ರೈ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಶ್ರೀ ಲಕ್ಷ್ಮೀ ಪ್ರಾರ್ಥಿಸಿ, ವಿದ್ಯಾಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು. ವಿದ್ಯಾರ್ಥಿನಿ ತೃಪ್ತಿ ಎಂ. ಮಯ್ಯಾಳ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top