ಹಳೆ ವಿದ್ಯಾರ್ಥಿ ಸಂಘಗಳು ವಿದ್ಯಾಸಂಸ್ಥೆಗಳ ಬೆನ್ನೆಲು: ವೇ.ಮೂ. ವೆಂಕಟ್ರಮಣ ಅಸ್ರಣ್ಣ

Upayuktha
0



ಸುರತ್ಕಲ್‌: ಹಳೆ ವಿದ್ಯಾರ್ಥಿ ಸಂಘಗಳು ವಿದ್ಯಾಸಂಸ್ಥೆಗಳ ಬೆನ್ನೆಲುಬಾಗಿದ್ದು ಗೋವಿಂದ ದಾಸ ಕಾಲೇಜು ಅಲುಮ್ನಿ ಅಸೋಸಿ ಯೇಶನ್ ಗೋವಿಂದ ದಾಸ ಕಾಲೇಜಿಗೆ ಸುಸಜ್ಜಿತವಾದ ನೂತನ ರಂಗಮಂದಿರವನ್ನು ನಿರ್ಮಿಸುತ್ತಿರುವುದು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸುರತ್ಕಲ್ ಪರಿಸರದ ಕಲಾ ಸಂಸ್ಥೆಗಳಿಗೆ ಮತ್ತು ಕಲಾ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುವಂತಾಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಶ್ರೀ ವೇದಮೂರ್ತಿ ವೆಂಕಟ್ರಮಣ ಅಸ್ರಣ್ಣ ನುಡಿದರು.

 ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನಲ್ಲಿ ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ ನಿರ್ಮಿಸುತ್ತಿರುವ ರಂಗಮಂದಿರದ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೋಕ್ತೇಸರ ಶ್ರೀ ವೇದಮೂರ್ತಿ ಐ. ರಮಾನಂದ ಭಟ್ ಗೋವಿಂದ ದಾಸ ಕಾಲೇಜು ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದು, ನೂತನ ರಂಗಮಂದಿರವು ಸುರತ್ಕಲ್ ಪರಿಸರಕ್ಕೆ ಕಲಶಪ್ರಾಯವಾಗಲಿ ಎಂದು ಆಶೀರ್ವಚನ ನೀಡಿದರು. 


ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ,  ಗೋವಿಂದ ದಾಸ ಕಾಲೇಜು ಅಲ್ಯಮ್ನಿ ಅಸೋಸಿಯೇಶನ್ ಆರಂಭದಿಂದಲೂ  ಕಾಲೇಜಿನ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದು ಕಾಲೇಜಿಗೆ 2.75 ಕೋಟಿ ವೆಚ್ಚದ ನೂತನ ರಂಗ ಮಂದಿರವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು.


ರAಗಮAದಿರ ನಿರ್ಮಾಣ ಸಮಿತಿಯ ಸಂಯೋಜಕ ಎಂ. ರಮೇಶ್ ರಾವ್ ಸ್ವಾಗತಿಸಿ,  ನೂತನ ರಂಗಮಂದಿರದ ನಿರ್ಮಾಣದ ರೂಪುರೇಷೆಗಳನ್ನು ಪ್ರಸ್ತುತ ಪಡಿಸಿದರು.


ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಅತಿಥಿಗಳನ್ನು ಗೌರವಿಸಿದರು. ರಂಗಮಂದಿರ ನಿರ್ಮಾಣ ಸಮಿತಿಯ ಗೌರವ ಸಲಹೆಗಾರರಾದ ಡಾ. ಕೆ. ರಾಜಮೋಹನ್ ರಾವ್, ಸತೀಶ್ ರಾವ್ ಇಡ್ಯಾ, ಅಗರಿ ರಾಘವೇಂದ್ರ ರಾವ್, ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ, ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಪ್ರಾಂಶುಪಾಲೆ ಲಕ್ಷ್ಮೀ,  ಗೋವಿಂದ ದಾಸ ಕಾಲೇಜು ಅಲುಮ್ನಿ ಅಸೋಸಿಯೇಶನ್‌ನ ಅಧ್ಯಕ್ಷೆ ಡಾ. ಸಾಯಿಗೀತಾ ಶುಭ ಹಾರೈಸಿದರು.


ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್., ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ಮಾಜಿ ಕಾರ್ಯದರ್ಶಿ ಐ. ಉಮಾದೇವಿ, ಗೋವಿಂದ ದಾಸ ಕಾಲೇಜಿನ ನಿಕಟಪೂರ್ವ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ಸ್ಟಾಫ್ ಸೆಕ್ರಟರಿ ಗೀತಾ ಕೆ., ಉಪನ್ಯಾಸಕರಾದ ಧನ್ಯಕುಮಾರ್ ವೆಂಕಣ್ಣವರ್, ಕುಮಾರ್ ಮಾದರ, ಕಾರ್ತಿಕ್ ಜೆ.ಎಸ್. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. ಗೋವಿಂದ ದಾಸ ಕಾಲೇಜು ಅಲುಮ್ನಿ ಅಸೋಸಿಯೇಶನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಯೇಶನ್‌ನ ವತಿಯಿಂದ ಗ್ವಾಲಿಯರ್‌ನಲ್ಲಿ ನಡೆದ ಎನ್.ಸಿ.ಸಿತರಬೇತಿಯನ್ನು ಪೂರ್ಣಗೊಳಿಸಿ ಕ್ಯಾಪ್ಟನ್ ಪದವಿಯಿಂದ ಮೇಜರ್ ಪದವಿಗೆ ಪದೋನ್ನತಿಗೊಂಡ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಮೇಜರ್ ಡಾ. ಸುಧಾ ಯು ಅವರನ್ನು ಸನ್ಮಾನಿಸಲಾಯಿತು ಮತ್ತು ಕಾಲೇಜಿನ 15 ವಿದ್ಯಾರ್ಥಿಗಳಿಗೆ 75,000/- ಮೊತ್ತದ ವಿದ್ಯಾರ್ಥಿ ವೇತನಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು.


ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಗೋವಿಂದ ದಾಸ ಕಾಲೇಜು ಅಲುಮ್ನಿ ಅಸೋಸಿಯೇಶನ್‌ನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top