ಭಾನುಕುಳಿ ಪಂಚಾಯತ್ ನಲ್ಲಿ ದೇಶಿ ಸೇವಾ ಬ್ರಿಗೇಡ್ ಶಾಖೆ ಪ್ರಾರಂಭ

Upayuktha
0



ಸಾಗರ: ತಾಲೂಕಿನ ಬಾರಂಗಿ ಹೋಬಳಿಯ, ಬಾನುಕುಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ದೇಶಿ ಸೇವಾ ಬ್ರಿಗೇಡ್ ನೂತನ ಶಾಖೆಯನ್ನು  ಯಶಸ್ವಿಯಾಗಿ ಪ್ರಾರಂಭಿಸಲಾಯಿತು.

 ಭಾನುಕುಳಿಯ ನೂತನ ಶಾಖೆಯ ಉದ್ಘಾಟನೆಯನ್ನು ದೇಶಿ ಸೇವಾ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಮೂರ್ತಿ ಯವರ ಸಮ್ಮುಖದಲ್ಲಿ ಭಾನುಕುಳಿಯಲ್ಲಿ ಜರುಗಿತು.


ಗ್ರಾಮ ಪಂ.ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು, ಮಹಿಳೆಯರು, ಯುವಕರು,  ಪುನೀತ್ ರಾಜಕುಮಾರ್ ಗೆಳೆಯರ ಬಳಗ ಹಾಗೂ ವಿದ್ಯಾರ್ಥಿಗಳು  ಶಾಖೆ ಪ್ರಾರಂಭಿಸಲು ಸ್ವಯಂ ಆಸಕ್ತಿಯಿಂದ ಭಾಗವಹಿಸಿದ್ದರು. ಹಾಗೂ ಅವರೆಲ್ಲರ ಸಲಹೆ, ಅಭಿಪ್ರಾಯಗಳಂತೆ ಶಾಖೆಯ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು ಮತ್ತು ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ.


ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಇಲಾಖೆಗಳಾದ ತಾಲೂಕು ಆರೋಗ್ಯ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು, ತಾಲೂಕು ಮೆಸ್ಕಾಂ ಅಧಿಕಾರಿಗಳು, ಹಾಗೂ ಇತರ ಅಧಿಕಾರಿಗಳನ್ನು ಕೂಡಲೆ ಸಂಪರ್ಕಿಸಿದಾಗ, ಅಧಿಕಾರಿಗಳು ಸಹ ಅತ್ಯುತ್ತಮವಾಗಿ ಸ್ಪಂದಿಸಿ   ,  ಸಮಸ್ಯೆಗಳನ್ನು ಪರಿಹರಿಸಿ ಕೊಡುವಲ್ಲಿ ಸಫಲವಾಯಿತು. 


ಸಾರ್ವಜನಿಕರ ಮುಖದಲ್ಲಿ ಮಂದಹಾಸದೊಂದಿಗೆ ದೇಶಿ ಸೇವಾ ಬ್ರಿಗೇಡ್ ಗೆ ಜೈ ಕಾರ ಮುಗಿಲು ಮುಟ್ಟುವಂತಾಯಿತು. ಸಭೆಗೆ ನೂರಾರು ಜನರು ಹಾಗೂ ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳಾ ಸದಸ್ಯರು ಹಾಜರಾಗಿದ್ದರು, ಶಾಖೆಯ ನೂತನ ಅಧ್ಯಕ್ಷರಾಗಿ ಸೋಮರಾಜ್ ಹುಲಿಬಳ್ಳಿ, ಮತ್ತು ಉಪಾಧ್ಯಕ್ಷರಾಗಿ ಸನ್ಮತಿ ಜೈನ್, ಶಶಿಕಲಾ ಧರ್ಮಪ್ಪ, ಹಾಲಪ್ಪ ಕೋಮನಕುರಿ ಹಾಗೂಪ್ರದಾನ ಕಾರ್ಯದರ್ಶಿ ಗಳಾಗಿ ಕೊಲ್ಲಪ್ಪ ಮಳವಳ್ಳಿ, ನೇಮರಾಜ್ ಕಡಗದ್ದೆ,ವಸಂತಿ ಜೈನ್ ಮಹೇಶ್ ಹುಲಿಬಳ್ಳಿ, ಮಂಜುನಾಥ್,ಅರುಣ್ ಜಟ್ಟಪ್ಪ, ಸಂಚಾಲಕರಾಗಿ ಮನ್ಮಥ ಬಿಳಿಗಾರು, ದಾನಶೂರ ಜೈನ್, ಗಣೇಶ್ ಆರೋಡಿ, ದೇವೇಂದ್ರಪ್ಪ ಗುಬ್ಬಗೋದು, ಪುಷ್ಪ ರಾಜ್, ನವೀನ್ ಜಿ, ಧನಂಜಯ ಹೆಚ್, ಟಿ,  ಇವರ ಆಯ್ಕೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಅಭಿಪ್ರಾಯ ಪಡೆದು ಸಂಸ್ಥಾಪಕ ಅಧ್ಯಕ್ಷರಾದ ಶ್ರೀಧರ ಮೂರ್ತಿ ಯವರು ಘೋಷಣೆ ಮಾಡಿದರು.


ಸಭೆಗೆ ಗ್ರಾಮ ಪಂಚಾಯಿತಿ ಜನಪ್ರತಿನಿದಿನಗಳಾದ ಸೋಮರಾಜ್ ಕೋಮನಕುರಿ,, ಹೇಮಾವತಿ, ಪದ್ಮಾರಾಜ್ ಚಪ್ಪರಮನೆ, ಹಾಗೂ ಬಿ ವಿ ವರ್ಧಮಾನ್ ಜೈನ್, ಸಂತೋಷ್ ಕುಮಾರ್ ಬಾಗಿಲುಮನೆ ಮತ್ತು ಸ್ತ್ರೀ ಶಕ್ತಿ ಸಂಘದ ಹಲವಾರು ಸದಸ್ಯರು ಹಾಜರಾಗಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top