ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2023-2024 ರ ಸಾಲಿನ ಪದವಿ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ಐದು ರ‍್ಯಾಂಕ್‌ಗಳು ಲಭ್ಯವಾಗಿವೆ. ಬಿಕಾಂ ನ ಸ್ವಾತಿ ಎಸ್ ಭಟ್ ಇವರು 4150 ರಲ್ಲಿ 3984 ಅಂಕ ಪಡೆದು ಮೂರನೇಯ ರ‍್ಯಾಂಕನ್ನು ಗಳಿಸಿದ್ದಾರೆ. ಇವರು ಪುತ್ತೂರಿನ ಕಲ್ಲಾರೆಯ ನಿವಾಸಿ ಶಿವಶಂಕರ ಭಟ್ ಎಸ್ ಹಾಗೂ ಉಷಾ ಎಸ್ ಭಟ್ ದಂಪತಿಗಳ ಪುತ್ರಿ.
ಬಿಕಾಂ ನ ಇನ್ನೋರ್ವ ವಿದ್ಯಾರ್ಥಿ ಪವನ್ ರಾಜ್ ಇವರು 4150 ರಲ್ಲಿ 3969 ಅಂಕಗಳನ್ನು ಪಡೆದುಕೊಂಡು 9 ನೇಯ ರ‍್ಯಾಂಕನ್ನು ಗಳಿಸಿರುತ್ತಾರೆ. ಇವರು ಮಂಜೇಶ್ವರದ ರಘು ಹಾಗೂ ಸುನೀತಾ ದಂಪತಿಗಳ ಪುತ್ರ.
ಬಿಎಸ್ಸಿ ಯ ಎಂಸಿಎಸ್ ವಿಭಾಗದ ಭವಿಷ್ ಕುಮಾರ್ 4150 ರಲ್ಲಿ 4019 ಅಂಕ ಗಳಿಸಿ 5 ನೇಯ ರ‍್ಯಾಂಕನ್ನು ಗಳಿಸಿದ್ದಾರೆ. ಇವರು ಪುತ್ತೂರಿನ ಶಾಂತಿಗೋಡು ನಿವಾಸಿ ರಮೇಶ್ ಗೌಡ ಹಾಗೂ ವಾರಿಜ ದಂಪತಿಗಳ ಪುತ್ರ.
ಬಿಎಸ್ಸಿ ಪರೀಕ್ಷೆಯಲ್ಲಿ ಎಂಸಿ ವಿಭಾಗದಲ್ಲಿ ಅನನ್ಯಾ ಡಿ 4150 ರಲ್ಲಿ 3985 ಅಂಕಗಳನ್ನು ಪಡೆದುಕೊಂಡು ಎಂಟನೇಯ ರ‍್ಯಾಂಕನ್ನು ಪಡೆದುಕೊಂಡಿದ್ದಾರೆ. ಇವರು ಬಂಟ್ವಾಳದ ದಾಸಕೋಡಿಯ ಧನಂಜಯ ಡಿ ಹಾಗೂ ಪಲ್ಲವಿ ದಂಪತಿಗಳ ಪುತ್ರಿ.
ಕಲಾ ವಿಭಾಗದ ಪರೀಕ್ಷೆಯಲ್ಲಿ ಎಚ್‌ಎಸ್ ವಿಭಾಗದಲ್ಲಿ ಶೋಭಾದೇವಿ 4550 ರಲ್ಲಿ 4130 ಅಂಕ ಪಡೆದುಕೊಂಡು ಹತ್ತನೇಯ ರ‍್ಯಾಂಕನ್ನು ಗಳಿಸಿಕೊಂಡಿದ್ದಾರೆ. ಇವರು ಬೆಳ್ತಂಗಡಿಯ ನಿಡ್ಡಾಜೆ ನಿವಾಸಿ ಸುಬ್ರಹ್ಮಣ್ಯ ಭಟ್ ಹಾಗೂ ಕಾವೇರಿ ದಂಪತಿಗಳ ಪುತ್ರಿ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ