ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ

Upayuktha
0



ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಅಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 


ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿರುವ ಡಾ. ಸುಕನ್ಯಾ ಮೇರಿ ಪ್ರಾಂಶುಪಾಲರು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆಯರು ಹೇಗೆ ಬಂದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು, ಬದುಕಿನಲ್ಲಿ ಧೈರ್ಯ ಛಲದೊಂದಿಗೆ ತಮ್ಮ ಗುರಿಯನ್ನು ಈಡೇರಿಸಿಕೊಳ್ಳುವುದರ ಬಗ್ಗೆ, ಮಹಿಳೆಯರು ಕುಟುಂಬವನ್ನು ಸಮಾಜವನ್ನು ಪೋಷಿಸುವ ರೀತಿ, ಅವರ ಮಹತ್ವ ಹಲವಾರು ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. 


ನಿತ್ಯಾನಂದ ವಿ. ಗಾಂವಕರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಅಭಿವೃದ್ಧಿಯ ಬಗ್ಗೆ, ಸಾಧನೆ ಮಾಡಿದ ಮಹಿಳೆಯರ ಬಗ್ಗೆ, ಕುಟುಂಬ, ಸಮಾಜ ನಿರ್ವಹಣಾ ಕೌಶಲ್ಯಗಳ ಬಗ್ಗೆ, ಮಹಿಳೆಯರ ಮಹತ್ವದ ಕೊಡುಗೆಗಳ ಬಗ್ಗೆ ವಿವರಿಸಿದರು.  ನಂತರ ನಮ್ಮ ಕಾಲೇಜಿನ ಬಿ.ಎಸ್.ಡಬ್ಲ್ಯೂ ಪದವಿ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ರಾಂಕ್ ಪಡೆದಿರುವ ಶ್ರೀನಿಧಿ ಬಿ.ಎಸ್. ಇವರಿಗೆ ಸ್ಮರಣಿಕೆ ನೀಡುವುದರೊಂದಿಗೆ ಸನ್ಮಾನಿಸಿದರು. 


ಸಮಾಜಕಾರ್ಯ ವಿಭಾಗದ ಉಪನ್ಯಾಸಕಿಯಾದ ಕು. ಸುಮತಿ ಬಿಲ್ಲವ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀಮತಿ ಬಿಂದು ಟಿ. ವೇದಿಕೆಯಲ್ಲಿ ಉಪಸ್ಥಿತರಿರುವ ಅತಿಥಿ ಗಣ್ಯರನ್ನು ಪರಿಚಯಿಸುವುದರೊಂದಿಗೆ ಎಲ್ಲರನ್ನು ಸ್ವಾಗತಿಸಿದರು.  ಕಾಲೇಜಿನ ತೃತಿಯ ಬಿ.ಕಾಂ. ವಿದ್ಯಾರ್ಥಿಗಳು ಪ್ರಾರ್ಥನೆಗೈದರು.  ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಸುಷ್ಮಾ ಟಿ. ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತಾಗಿ ಗೀತೆಯನ್ನು ಹಾಡಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿರುವ ಮಹಿಳಾ ಕೋಶ ಸಂಯೋಜಿಕೆ ಡಾ. ಆಶಾ ಸಿ. ಇಂಗಳಗಿ ಧನ್ಯವಾದ ಸಮರ್ಪಿಸಿದರು. 


ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಹಮೀದಾ ಬಾನು, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಡಾ. ರಘು ನಾಯ್ಕ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಪ್ರಶಾಂತ ಎನ್., ವಾಣಿಜ್ಯಶಾಸ್ತçದ ಸಹ ಪ್ರಾಧ್ಯಾಪಕರಾದ ಡಾ. ಉದಯ ಶೆಟ್ಟಿ ಕೆ. ಹಾಗೂ ಬೋಧಕ/ಬೋಧಕೇತರರು ಉಪಸ್ಥಿತರಿದ್ದರು.  



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top