ಭೂ ಸೇನೆಯ ಇನ್ಫೆಂಟ್ರಿ ವಿಭಾಗದಲ್ಲಿ ಸುರತ್ಕಲ್ ನ ಆಕಾಶ್ ಅಧಿಕಾರ ಸ್ವೀಕಾರ

Upayuktha
0



ಮಂಗಳೂರು: ಭಾರತೀಯ ಭೂ ಸೇನೆಯ ಇನ್ಫ್ಯಾಂಟ್ರಿ ವಿಭಾಗದಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಸುರತ್ಕಲ್ ನ ಆಕಾಶ್ ಆರ್ ಅಧಿಕಾರ ಸ್ವೀಕರಿಸಿದ್ದಾರೆ. ಸುರತ್ಕಲ್ ಅಗರಮೇಲು ನಿವಾಸಿಯಾಗಿರುವ ಆಕಾಶ್ ಆರ್ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಭಾರಿಗೆ ಊರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಕಾಶ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದ್ದು, ವಿಮಾನ ನಿಲ್ದಾಣದಿಂದ ಸುರತ್ಕಲ್ ತನಕ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲಾಗಿದೆ. 


ರಾಷ್ಟ್ರ ಭಕ್ತ ವೇದಿಕೆ ಈ ಅದ್ದೂರಿ ಸ್ವಾಗತ ನೀಡಿದ್ದು, ಸುರತ್ಕಲ್‌ ನಲ್ಲಿ ನಿವೃತ್ತ ಸೈನ್ಯಾಧಿಕಾರಿಗಳು ಹಾಗೂ ನಾಗರಿಕರು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಹೂ ಹಾರ ಹಾಕಿ ಆಕಾಶ್ ಅವರಿಗೆ ಗೌರವ ಸಲ್ಲಿಸಲಾಗಿದೆ. 


ಇಂಜೀನಿಯರಿಂಗ್ ಮುಗಿಸಿರುವ ಆಕಾಶ್ ಕುಟುಂಬದಲ್ಲಿ ಬಹುತೇಕ ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಜೀನಿಯರಿಂಗ್ ಮುಗಿಸಿದ ಬಳಿಕ ಸೇನೆಗೆ ಸೇರಿಕೊಂಡ ಆಕಾಶ್ ಬಿಹಾರದಲ್ಲಿ ತರಬೇತಿ ಮುಗಿಸಿ ಪ್ರತಿಷ್ಠಿತ ಗೂರ್ಖಾ ರೆಜಿಮೆಂಟ್‌ ನಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ. ಊರಿಗೆ ಆಗಮಿಸಿದ ಆಕಾಶ್ ಅವರಿಗೆ ಸ್ವಾಗತ ಕೋರಿದ ರಾಷ್ಟ್ರ ಭಕ್ತ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಕಾಶ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಈ ಬಗ್ಗೆ ಆಕಾಶ್ ತಾಯಿ ತುಳಸಿ ಅವರು ಕೂಡಾ ಸಂತಸ ಹಂಚಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top