ಸಿದ್ದರಾಮಯ್ಯ ಬಜೆಟ್: ಔರಂಗಜೇಬನಿಗೆ ಲಕ್ಷಾಂತರ ರೂ, ಶಿವಾಜಿಗೆ ಕೇವಲ 200 ರೂ...?

Upayuktha
0


ಔರಂಗಜೇಬನ ಗೋರಿಗೆ ನೀಡುವ ಧನಸಹಾಯ ತಕ್ಷಣ ನಿಲ್ಲಿಸಿ, ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯಕ್ಕೆ ಹೆಚ್ಚಿನ ನೆರವು ನೀಡಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ




ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಕೇವಲ ಅಲ್ಪಸಂಖ್ಯಾತರ ಓಲೈಕೆಯದ್ದಾಗಿದ್ದು ಇದು ಖಂಡನೀಯ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಸಮಿತಿಯ ರಾಜ್ಯ ಸಂಯೋಜಕ ಸುನಿಲ್ ಘನವಟ್ ಅವರು ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಬಜೆಟ್‌ ಆದ್ಯತೆಗಳನ್ನು ಪ್ರಶ್ನಿಸಿದ್ದಾರೆ.


ಕೇಂದ್ರ ಸರಕಾರದಿಂದ ಹಾಗೂ ಭಾರತೀಯ ಪುರಾತತ್ವ ಇಲಾಖೆಯಿಂದ ಔರಂಗಜೇಬನ ಗೋರಿಯ ನಿರ್ವಹಣೆಗಾಗಿ ಪ್ರತಿವರ್ಷ ಲಕ್ಷಾಂತರ ರೂಪಾಯಿಗಳ ನೆರವು ನೀಡಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2021-22 ರಲ್ಲಿ ರೂ. 2,55,160 ಮತ್ತು 2022-23 (ನವೆಂಬರ್ ವರೆಗೆ) ರೂ 2,00,626 ಖರ್ಚು ಮಾಡಲಾಗಿದೆ. 


ಈ ರೀತಿ, ಇದುವರೆಗೆ ರೂ. 6.50 ಲಕ್ಷ ಹಣ ವ್ಯಯಿಸಲಾಗಿದೆ. ಆದರೆ ಮಹಾರಾಷ್ಟ್ರದ ಗೌರವಯುತ ಸಂಸ್ಕೃತಿಯ ಸಂಕೇತವಾದ ಸಿಂಧುದುರ್ಗ ಕೋಟೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಏಕೈಕ ದೇವಸ್ಥಾನಕ್ಕೆ ಮಹಾರಾಷ್ಟ್ರ ಸರಕಾರವು ಕೇವಲ 250 ರೂಪಾಯಿಗಳ ಮಾಸಿಕ ಸಹಾಯವನ್ನು ನೀಡುತ್ತಿದೆ. “ಹಿಂದೂ ಧರ್ಮ, ಮಹಾರಾಷ್ಟ್ರ ಸಂಸ್ಕೃತಿ ಮತ್ತು ಸ್ವರಾಜ್ಯದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ದೇವಾಲಯಕ್ಕೆ ಇಷ್ಟು ಕಡಿಮೆ ಅನುದಾನ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ" ಎಂದು ಅವರು ಹೇಳಿದ್ದಾರೆ.


"ಔರಂಗಜೇಬನ ಸಮಾಧಿಯ ನಿರ್ವಹಣೆಗೆ ನೀಡಲಾಗುವ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಸಾಕಷ್ಟು ಆರ್ಥಿಕ ಸಹಾಯವನ್ನು ಘೋಷಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕ  ಸುನೀಲ್ ಘನವಟ್ ಒತ್ತಾಯಿಸಿದ್ದಾರೆ. ಸರಕಾರವು ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜವು ಈ ಅನ್ಯಾಯದ ವಿರುದ್ಧ ತೀವ್ರ ಆಂದೋಲನವನ್ನು ಮಾಡುತ್ತದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top