ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ- ನಾಮಫಲಕ ಅನಾವರಣ

Upayuktha
0


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಟಿ.ಓ ಕಚೇರಿ ಬಳಿ "ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ" ಎಂಬ ನಾಮಫಲಕವನ್ನು ಹಲವು ಗಣ್ಯರ ಉಪಸ್ಥಿತಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಅನಾವರಣಗೊಳಿಸಿದರು.


ನಂತರ ಮಾತನಾಡಿದ ಶಾಸಕರು ಮಂಗಳಾದೇವಿ ದೇವಸ್ಥಾನ ಎಂಬುದು ಈ ಊರಿಗೆ ಮಾತ್ರವಲ್ಲ, ಪರವೂರು ಸೇರಿದಂತೆ ನಾಡಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲೊಂದಾಗಿದೆ. ಇಂತಹ ಪುಣ್ಯಕ್ಷೇತ್ರದ ಹೆಸರಿನಲ್ಲಿ ಇನ್ನು ಮುಂದೆ ಈ ರಸ್ತೆ ಕರೆಯಲ್ಪಡುವುದು ಹರ್ಷ ತಂದಿದೆ ಎಂದರು.


ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆಯಿಂದ, ಎಬಿ ಶೆಟ್ಟಿ ವೃತ್ತದಿಂದ, ಮಂಕಿಸ್ಮಾಂಡ್ ಮುಖಾಂತರ ಮಂಗಳಾದೇವಿ ದೇವಸ್ಥಾನ ಶಮಿ ಕಟ್ಟೆಯಾಗಿ ಫಸ್ಟ್ ರೈಲ್ವೆ ಬ್ರಿಡ್ಜ್ ವರೆಗಿನ ರಸ್ತೆ ಇದಾಗಿದ್ದು "ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ" ಎಂದು ನಾಮಕರಣವಾಗಿದೆ.


ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ರಮೇಶ್ ಕಂಡೆಟ್ಟು, ಮಾಜಿ ಮೇಯರ್ ಗಳಾದ ಮನೋಜ್ ಕುಮಾರ್ ಕೋಡಿಕಲ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಮಾಜಿ ಉಪ ಮೇಯರ್ ಭಾನುಮತಿ, ಶೈಲೇಶ್ ಶೆಟ್ಟಿ, ಭರತ್ ಕುಮಾರ್, ಲತೀಫ್ ಕಂದುಕ, ರೇವತಿ ಶ್ಯಾಮ್ ಸುಂದರ್ ಶೆಟ್ಟಿ, ನಿತಿನ್ ಕುಮಾರ್, ಭಾಸ್ಕರ ಚಂದ್ರ ಶೆಟ್ಟಿ ಸೇರಿದಂತೆ ಅನೇಕ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top