ಸಾಮೂಹಿಕ ಹನುಮಾನ್ ಚಾಲೀಸಾ ಪಠಣ: 22,000 ಕ್ಕೂ ಅಧಿಕ ಮಂದಿ ಭಾಗಿ

Upayuktha
0

ಶನಿಗೋಚರದ ಆಧ್ಯಾತ್ಮಿಕ ಲಾಭ ಪಡೆಯಲು ಸಾಮೂಹಿಕ ಹನುಮಾನ ಚಾಲೀಸಾ ಪಠಣ; 22 ಸಾವಿರಕ್ಕೂ ಅಧಿಕ ಹಿಂದೂಗಳ ಸಹಭಾಗ !


ಬೆಂಗಳೂರು: 29 ಮಾರ್ಚ್ 2025 ರಂದು ಶನಿಗೋಚರವಿತ್ತು, ಅಂದರೆ ಈ ದಿನ ಶ್ರೀ ಶನಿ ದೇವರು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿದ್ದಾರೆ. ಈ ಶನಿ ಗೋಚರದಿಂದ ಭಕ್ತರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಲು ಹಾಗೂ ಶೀಘ್ರ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವ ಉದ್ದೇಶದಿಂದ ಸಂಪೂರ್ಣ ದೇಶದಲ್ಲಿ ಸಾಮೂಹಿಕ ಶ್ರೀಹನುಮಾನ ಚಾಲಿಸಾ ಪಠಣದ ಆಯೋಜನೆ ಮಾಡಲಾಗಿತ್ತು. 


ಪಠಣದ ಸಂದರ್ಭದಲ್ಲಿ ಶ್ರೀಹನುಮಂತ ಮತ್ತು ಶ್ರೀಶನಿದೇವರ ಚರಣಗಳಲ್ಲಿ ಹಿಂದೂ ರಾಷ್ಟ್ರದ ಶೀಘ್ರ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ಉಪಕ್ರಮದಲ್ಲಿ ಸಹಭಾಗಿಯಾಗಿರುವ ಅನೇಕ ಭಕ್ತರು ತಮ್ಮ ಆಧ್ಯಾತ್ಮಿಕ ಅನುಭೂತಿಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುತ್ತಾ ಈ ರೀತಿಯ ಆಯೋಜನೆಯಿಂದ ಶಕ್ತಿ ದೊರೆಯುತ್ತಿದೆಯೆಂದೂ ವ್ಯಕ್ತಪಡಿಸಿದರು.


ಈ ವೇಳೆ ಬೇರೆ ಬೇರೆ ಸ್ಥಳಗಳಲ್ಲಿರುವ ಶ್ರೀಹನುಮಂತನ ದೇವಸ್ಥಾನಗಳಲ್ಲಿ, ಶ್ರೀರಾಮ ದೇವಸ್ಥಾನಗಳು ಸೇರಿ ಸುಮಾರು 22 ಸಾವಿರಗಿಂತಲೂ ಹೆಚ್ಚಿನ ಭಕ್ತರು, ಸಾಧಕರು, ಮತ್ತು ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು.ಬೆಂಗಳೂರಿನಲ್ಲಿಯೂ ಈ ಪಠಣ ನಡೆಸಲಾಯಿತು. ಬೆಂಗಳೂರಿನ ಹಲವಾರು ಸಂಘಟನೆಯ ಪ್ರತಿನಿಧಿಗಳು, ನ್ಯಾಯವಾದಿಗಳು, ಉದ್ಯಮಿಗಳು, ವಿಚಾರವಂತರು ಹಾಗೂ ಬೇರೆ ಬೇರೆ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಗಳು ಉತ್ಸಾಹದಿಂದ ಭಾಗವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top