ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಸಾಮೂಹಿಕ ಯುಗಾದಿ ಆಚರಣೆ !
ಬೆಂಗಳೂರು: ಫಾಲ್ಗುಣ ಚೈತ್ರ ಪ್ರತಿಪದೆ, ಈ ದಿನ ಸಂಪೂರ್ಣ ದೇಶ ಯುಗಾದಿ ಆಚರಿಸುತ್ತಿದೆ. ಸಮಸ್ತ ಹಿಂದೂ ಸಮಾಜಕ್ಕೆ ಈ ದಿನ ಹೊಸವರ್ಷವೂ ಆಗಿದೆ. ಇದರ ನಿಮಿತ್ತ ಬೆಂಗಳೂರಿನ ಹಲವೆಡೆ ಸಾಮೂಹಿಕ ಯುಗಾದಿ ಆಚರಿಸಲಾಯಿತು. 200ಕ್ಕೂ ಅಧಿಕ ಸಮಿತಿಯ ಕಾರ್ಯಕರ್ತರು ಮತ್ತು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಹಿಂದೂ ಧರ್ಮಶಾಸ್ತ್ರಕ್ಕನುಸಾರ ಎತ್ತರದ ಬ್ರಹ್ಮ ಧ್ವಜವನ್ನು ನಿಲ್ಲಿಸಿ ವಿಧಿವತ್ತಾಗಿ ಪೂಜಿಸಲಾಯಿತು.
ಸದ್ಯ ರಾಜ್ಯದಾದ್ಯಂತ ಬೆಲೆ ಏರಿಕೆ, ಭ್ರಷ್ಟಚಾರ, ಓಲೈಕೆ, ಅಪರಾಧ ಮತ್ತು ಅತ್ಯಾಚಾರ, ಹಿಂದೂ ಸಮಾಜದ ಮೇಲೆ ಆಘಾತದ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಹೇಗೆ ಪ್ರಭು ಶ್ರೀರಾಮನ ಸಮಯದಲ್ಲಿ ಆದರ್ಶ ರಾಜ್ಯಾಡಳಿತವಿತ್ತು, ಅದೇ ರೀತಿಯ ರಾಮರಾಜ್ಯವು ಶೀಘ್ರದಲ್ಲಿ ಸ್ಥಾಪನೆಯಾಗಬೇಕು.
ಭಾರತವು ಆದರ್ಶ ರಾಮರಾಜ್ಯದಂತಾಗಬೇಕು ಎಂದು ಪ್ರಭು ಶ್ರೀರಾಮನಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು, ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನು ಯುಗಾದಿಯಂದು ಅಯೋದ್ಯೆಯಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಿದಂತೆ, ವಿಶ್ವವಸು ಸಂಸವತ್ಸರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಕಲ್ಪ ಮಾಡಲಾಯಿತು.
ಅದಕ್ಕಾಗಿ ಎಲ್ಲ ಹಿಂದೂ ಬಾಂಧವರು ಸಂಘಟಿತಭಾವದಿಂದ ಕಾರ್ಯ ಮಾಡಲು ನಿಶ್ಚಯ ಮಾಡಿದರು. ಜೊತೆಗೆ ನೆರೆದಿದ್ದ ಹಿಂದೂ ಸಮಾಜವು ರಾಮರಾಜ್ಯದ ಸ್ಥಾಪನೆಗಾಗಿ ಆವಶ್ಯಕವಿರುವ ಧರ್ಮಜಾಗೃತಿ ಮೂಡಿಸಲು ನಾವು ಇಂದಿನಿಂದ ಪ್ರಯತ್ನಿಸುತ್ತೇವೆ ಎಂದು ಸಂಕಲ್ಪ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ