ಈಗಿನ ಕಾಲದಲ್ಲಿ ನಮಗಂತೂ ಮೊಬೈಲ್ ಇಲ್ಲದೇ ಜೀವನ ಸಾಗಿಸಲು ಸಾಧ್ಯವೇ ಇಲ್ಲದಂತೆ ಬದುಕುತ್ತಿದ್ದೇವೆ.ಒಂದೇ ಮನೆಯಲ್ಲಿ ಇದ್ದು ಎದುರು ಕುಳಿತು ಮಾತಾಡುವ ಬದಲು ಮೊಬೈಲ್ ಫೋನಿನಲ್ಲೇ ಸಂದೇಶ ರವಾನಿಸುವ ಜನರು ಈಗಿನ ಕಾಲದಲ್ಲಿ ಕಾಣಸಿಗುತ್ತಾರೆ. ಆನ್ಲೈನ್ -ಆಫ್ಲೈನ್ ಗಳ ಪ್ರಪಂಚದಲ್ಲಿ ಸಂಬಂಧಗಳ ಬೆಲೆಯನ್ನು ಅರಿತುಕೊಳ್ಳುವುದು ಅತೀ ಕಡಿಮೆಯಾಗಿದೆ.
ಹಿಂದಿನ ಕಾಲವು ಬಹಳ ಚೆನ್ನಾಗಿತ್ತು ಸಂದೇಶ ರವಾನಿಸಲು ಪತ್ರವನ್ನು ಬರೆಯುತ್ತಿದ್ದರು. ಈಗಿನ ಕಾಲದಲ್ಲಿ ಕೋಪ, ಖುಷಿ, ಪ್ರೀತಿ, ದುಃಖ ಮೊಬೈಲ್ ನಲ್ಲಿ ಅಡಗಿದೆ. ಬೆಳಿಗ್ಗೆ ಎದ್ದೇಳಲು ಕೋಳಿ ಕೂಗಿದರೆ ಎಚ್ಚರವಾಗುತ್ತಿತ್ತು ಹಿಂದಿನ ಕಾಲದಲ್ಲಿ. ಆದರೆ, ಇಂದಿನ ಕಾಲದಲ್ಲಿ ಮೊಬೈಲ್ ಫೋನಿನ ಅಲಾರಾಂ ಆದರೆ ಎಚ್ಚರವಾಗುವುದು.
ಈ ಕಲಿಯುಗದಲ್ಲಿ ವಿಪರ್ಯಾಸವೆಂದರೆ ಸತ್ತಾಗ ಸ್ಟೇಟಸ್ ಹಾಕಿ ಅಳುವ ಚಿತ್ರವನ್ನು ಹಾಕುವ ಜನರು ಜೀವವಿದ್ದಾಗ ಮತ್ಸರಪಡುತ್ತಾ ನಗು ನಗುತ್ತಾ ಮಾತಾಡದೇ ಇರುವರು. ಮೊಬೈಲ್ ನಿಂದ ನಮಗೆ ಎಷ್ಟು ಅಪಾಯವೋ ಪ್ರಾಣಿ - ಪಕ್ಷಿ ಸಂಕುಲಕ್ಕೂ ಅಪಾಯ ಅಷ್ಟೇಯಿದೆ. ದಾರಿಯಲ್ಲಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ.
ಬದುಕೆಂಬುವುದು ಮೂರು ದಿನದ್ದೂ , ಸಾವೆಂಬುವುದು ಎಂದೂ ಬರುವುದೋ ತಿಳಿಯದು. ಮೊಬೈಲ್ ಜೀವನದಲ್ಲಿರಲಿ ಹಾಗೂ ಜೀವನವಿಡೀ ಮೊಬೈಲ್ ಗಾಗಿ ಮೀಸಲಿಡುವುದು ಬೇಡ ನಮ್ಮ ಜೀವನವನ್ನು. "ಮೊಬೈಲ್ ಬಳಸೋಣ ಇತಿ-ಮಿತಿಯಲ್ಲಿ ".
-ಸುಚಿರಾ ಪಿ ಶೆಟ್ಟಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ