ಮಂಗಳೂರು: ಪವಿತ್ರ ರಂಜಾನ್ ಮಾಸದಲ್ಲಿ 9ನೇ ಬಾರಿಗೆ ಫುಡ್ ಸ್ಟ್ರೀಟ್ ಫೆಸ್ಟಿವಲ್ ಅನ್ನು ಫಿಜಾ ಬೈ ನೆಕ್ಸಸ್ ಆಯೋಜಿಸಿದೆ. ರಂಜಾನ್ ಸಂಪ್ರದಾಯಗಳಲ್ಲಿ ಆಹಾರವು ಅವಿಭಾಜ್ಯ ಪಾತ್ರ ವಹಿಸುತ್ತದೆ, ಏಕೆಂದರೆ ಈ ಸಮಯದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು (ರೋಜಾ) ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನೆಕ್ಸಸ್ ಮಾಲ್‌ನ ಫಿಜಾದಲ್ಲಿ ಒಂದು ತಿಂಗಳ ಕಾಲ ರುಚಿಕರವಾದ ಔತಣಕೂಟವನ್ನು ಆಯೋಜಿಸಿದೆ.
ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುವಂತಹ ವಿವಿಧ ಬಗೆಯ ಕಬಾಬ್‌ಗಳು, ಅದ್ಭುತ ರುಚಿಯ ಬಿರಿಯಾನಿ, ಫಲಾಫೆಲ್, ಹಲೀಮ್, ಶೀರ್ ಖುರ್ಮಾ ಸೇರಿದಂತೆ ಸಿಹಿತಿಂಡಿಗಳು ಮತ್ತು ಪಾನೀಯಗಳನ್ನು ಇಲ್ಲಿವೆ. ನೀವು ಈ ವರ್ಷ ರಂಜಾನ್ ಅನ್ನು ಸ್ವಲ್ಪ ವಿಭಿನ್ನವಾಗಿ ಸ್ವಾಗತಿಸಲು ಸಿದ್ಧರಿದ್ದರೆ, ನೆಕ್ಸಸ್ ಮಾಲ್ ನ ಫಿಜಾಗೆ ಭೇಟಿ ನೀಡಿ ಮತ್ತು ಈ ಒಂದು ತಿಂಗಳ ಈ ಉತ್ಸವದಲ್ಲಿ ಪ್ರತಿದಿನ ಸಂಜೆ 4 ರಿಂದ ರಾತ್ರಿ 10 ರವರೆಗೆ ವೈವಿಧ್ಯಮಯ ಊಟದ ರುಚಿ ನೋಡಿ.
ನೆಕ್ಸಸ್ನ ಫಿಜಾದಲ್ಲಿ ರಂಜಾನ್ ಹಬ್ಬಕ್ಕಾಗಿ ಅತ್ಯದ್ಭುತವಾದ ಫ್ಯಾಷನ್ ಸಂಗ್ರಹಗಳ ಜೊತೆಗೆ, ಪಾದರಕ್ಷೆಗಳು, ಸೌಂದರ್ಯ, ಪರಿಕರಗಳು ಜನರ ಕಣ್ಮನ ಸೆಳೆಯಲಿದೆ. ಈ ಹಬ್ಬದ ಋತುವಿನಲ್ಲಿ ಮಂಗಳೂರಿನ ನೆಕ್ಸಸ್ ಬೈ ಫಿಜಾದಲ್ಲಿ ತಪ್ಪದೇ ಶಾಪಿಂಗ್ ಮಾಡಿ.
ಕಾರ್ಯಕ್ರಮದ ವಿವರಗಳು
ಏನು: ರಂಜಾನ್ ಫುಡ್ ಸ್ಟ್ರೀಟ್ ಫೆಸ್ಟಿವಲ್
ಯಾವಾಗ: ಮಾರ್ಚ್ 30 ರವರೆಗೆ ಸಂಜೆ 4:00 ರಿಂದ ರಾತ್ರಿ 10:00 ರವರೆಗೆ
ಸ್ಥಳ: ಫಿಜಾ ಬೈ ನೆಕ್ಸಸ್ ಮಾಲ್, ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ