ಮಾ.18: ವಿವೇಕಾನಂದ ಕಾಲೇಜಿನಲ್ಲಿ ಅಂತರ್ ವಿವಿ ಮಟ್ಟದ ಸಾಹಿತ್ಯ- ಸಾಂಸ್ಕೃತಿಕ ಸ್ಪರ್ಧೆ

Upayuktha
0



ಪುತ್ತೂರು: ಇಲ್ಲಿಯ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ(ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ವಿಭಾಗವು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದಶಮಾನೋತ್ಸವವನ್ನು ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ 2025 ರ ಸಲುವಾಗಿ ಮಾರ್ಚ್ 18 ರಂದು  ವಿವೇಕೋತ್ಸವ-25 ಕಾರ್ಯಕ್ರಮ ನಡೆಯಲಿದೆ. 


ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗಳಿಗೆ ಒಳಪಡುವ ಪದವಿ ಕಾಲೇಜುಗಳ  ವಿದ್ಯಾರ್ಥಿಗಳು ಈ ಸ್ಫರ್ಧೆಯಲ್ಲಿ  ಭಾಗವಹಿಸಬಹುದಾಗಿದೆ. 


ಕನ್ನಡ, ಹಿಂದಿ, ಸಂಸ್ಕೃತ ಇಂಗ್ಲಿಷ್ ಭಾಷಣ ಹಾಗೂ ಪ್ರಬಂಧ,ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಗೀತೆ, ಜಾನಪದ ಗೀತೆ, ಭಗವದ್ಗೀತೆ ಕಂಠಪಾಠ, ವರ್ಣ ಚಿತ್ರಕಲೆ, ತಾಳ ವಾದ್ಯ ಸಂಗೀತ ಸ್ಪರ್ಧೆ, ಭರತನಾಟ್ಯ,ಕವನ ರಚನೆ, ಚಿತ್ರ ಲೇಖನ ಸ್ಪರ್ಧೆ, ಮಾಕ್ ಪ್ರೆಸ್,ಹಾಗೂ ಕ್ವಿಜ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಸ್ಪರ್ಧೆಗಳು ಏಕಕಾಲದಲ್ಲಿ ನಡೆಯುವುದರಿಂದ ಪ್ರತಿಯೊಂದು ಸ್ಪರ್ಧೆಗೂ ಪ್ರತ್ಯೇಕ ಸ್ಪರ್ಧಿಗಳನ್ನು ಕಳುಹಿಸಿಕೊಡಬೇಕು. 


ಪ್ರತಿಯೊಂದು ಸ್ಪರ್ಧೆಗೂ ಒಂದು ಕಾಲೇಜಿನಿಂದ 5 ಜನ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪ್ರಥಮ ಮತ್ತು ದ್ವಿತೀಯ ಬಹುಮಾನ ವಿಜೇತರಿಗೆ ನಗದು ಬಹುಮಾನವಿದೆ ಹಾಗೂ ಹೆಚ್ಚು ಅಂಕ ಪಡೆದ ಕಾಲೇಜಿಗೆ ವಿವೇಕಾನಂದ ಜಯಂತಿ ಫಲಕ ನೀಡಿ ಚಾಂಪಿಯನ್ ತಂಡವೆಂದು ಗುರುತಿಸಲಾಗುವುದು. 


ಯಾವುದೇ ಸ್ಪರ್ಧಿಗೂ ಪ್ರವೇಶ ಶುಲ್ಕವಿಲ್ಲ. ಸ್ಫರ್ಧೆಗಳಿಗೆ ಭಾಗವಹಿಸುವ ವಿದ್ಯಾರ್ಥಿಗಳ ಹೆಸರುಗಳನ್ನು ದಿನಾಂಕ 14-3-2025 ರ ಶುಕ್ರವಾರದೊಳಗಾಗಿ ಕಾಲೇಜಿಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕ ಡಾ.ಮನಮೋಹನ ಎಂ 9972672259 ಇವರನ್ನು ಸಂಪರ್ಕಿಸಬೇಕಾಗಿ ಕಾಲೇಜು ತಿಳಿಸಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top