ಮಂಗಳೂರು: ನೋವು ನಿರ್ವಹಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೃತಂಜನ್ ಹೆಲ್ತ್ ಕೇರ್ ಸಂಸ್ಥೆಯು ಸ್ತ್ರೀಯರಿಗೆ ಅವಶ್ಯವಿರುವ ಉನ್ನತ ಗುಣಮಟ್ಟದ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳು ಕೈಗೆಟಕುವ ರೀತಿಯಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ ಆರಂಭಿಸಿದ 'ಕಾಂಫಿ' ಬ್ರ್ಯಾಂಡ್ ಒಂದು 100 ಕೋಟಿ ರೂಪಾಯಿ ಮೌಲ್ಯದ ಬ್ರಾಂಡ್ ಆಗಿ ಬೆಳೆದಿದೆ.
ಸ್ಯಾನಿಟರಿ ನ್ಯಾಪ್ ಕಿನ್‍ಗಳು, ಟ್ಯಾಂಪೂನ್‍ಗಳು, ಮುಟ್ಟಿನ ಕಪ್ ಗಳು ಮತ್ತು ಪಿರಿಯಡ್ ಪೇನ್ ರೋಲ್ ಆನ್ ಗಳು ಸೇರಿದಂತೆ ಬಹಳಷ್ಟು ಮುಟ್ಟಿನ ನೈರ್ಮಲ್ಯ ಕಾಪಾಡುವ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಲಕ್ಷಾಂತರ ಮಹಿಳೆಯರಿಗೆ ಒದಗಿಸುತ್ತಿದೆ ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಸಂಭು ಪ್ರಸಾದ್ ಹೇಳಿದ್ದಾರೆ.
ಪ್ರಾಜೆಕ್ಟ್ ದಿಶಾ ಅಡಿಯಲ್ಲಿ ದೇಶಾದ್ಯಂತ 1800ಕ್ಕೂ ಹೆಚ್ಚು ಪಟ್ಟಣಗಳ 7 ಲಕ್ಷ ಗ್ರಾಹಕರ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸಲು ಮತ್ತು ನೈರ್ಮಲ್ಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಉತ್ತೇಜನ ನೀಡಿದೆ. ಈ ನಿಟ್ಟಿನಲ್ಲಿ ಕಾಂಫಿ ಸಂಸ್ಥೆಯು ಋತುಚಕ್ರದ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಮುಟ್ಟಿನ ನೈರ್ಮಲ್ಯ ಕಾಪಾಡುವ ಉತ್ಪನ್ನಗಳನ್ನು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಮುಟ್ಟಿನ ಪ್ರಕ್ರಿಯೆಯನ್ನು ಎದುರಿಸುವ ಭಾರತದ 35.5 ಕೋಟಿ ಮಹಿಳೆಯರಲ್ಲಿ ಕೇವಲ ಶೇ.36ರಷ್ಟು ಮಹಿಳೆಯರು ಮಾತ್ರವೇ ಪ್ರಸ್ತುತ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಬಳಸುತ್ತಾರೆ. ಈ ಅಂಕಿ ಅಂಶಗಳ ಪ್ರಕಾರ ಬಹಳಷ್ಟು ಮಹಿಳೆಯರು ಮತ್ತು ಹುಡುಗಿಯರು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮಂದಿಗೆ ಗುಣಮಟ್ಟದ ಮುಟ್ಟಿನ ನೈರ್ಮಲ್ಯ ಕಾಪಾಡುವ ಉತ್ಪನ್ನಗಳ ಲಭ್ಯತೆ ಬಹಳ ಕಡಿಮೆ ಇದೆ. ಕಾಂಫಿ ಬ್ರಾಂಡ್ ಅಂತಹ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ ಮತ್ತು ಅವರ ಅಗತ್ಯಗಳನ್ನು ಪರಿಹರಿಸಲು ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ