ಪುತ್ತೂರು: ಎನ್ ಸಿ ಸಿ ದೇಶದ ರಕ್ಷಣೆಗಾಗಿ ಸ್ಥಾಪಿತವಾಗಿದ್ದು, ಇಲ್ಲಿ ಮಾನಸಿಕ ಸದೃಢತೆ ಮತ್ತು ದೈಹಿಕ ಸಾಮರ್ಥ್ಯವು ತುಂಬಾ ಮುಖ್ಯವಾಗಿರುತ್ತದೆ. ಹಾಗೆಯೇ ದೇಶ ಸೇವೆ ಮಾಡಬೇಕಾದರೆ ಭಾಷೆ, ಪ್ರಾದೇಶಿಕ ಸಂಸ್ಕೃತಿಯನ್ನು ಅರಿತುಕೊಳ್ಳುವುದು ಬಹುಮುಖ್ಯ ವಿಚಾರ.
ಸೇನೆಗಳಿಗೆ ಸೇರಿಕೊಳ್ಳುವ ಸಂದರ್ಭದಲ್ಲಿ ಭಾವನಾತ್ಮಕ ವಿಚಾರಗಳು, ಕುಟುಂಬದಿಂದ ನಿರಾಕರಣೆ, ಸಾವಿನ ಭಯ ಮುಂತಾದ ಸವಾಲುಗಳು ನಿಮ್ಮನ್ನು ಕಾಡಬಹುದು ಆದರೆ ಇವೆಲ್ಲವನ್ನೂ ಹಿಮ್ಮೆಟ್ಟಿ ನಿಂತಾಗ ಮಾತ್ರ ನಾವು ದೇಶದ ಭಾಗವಾಗಿ ಮುಂದುವರೆಯಲು ಸಾಧ್ಯ ಮತ್ತು ಭಾರತವು ವಿಶ್ವಗುರುವಾಗುವಲ್ಲಿ ದೇಶದ ಯುವಜನತೆಯ ಮಾತ್ರ ಅತ್ಯಂತ ಮಹತ್ವವಾದುದು ಹಾಗಾಗಿ ಯುವಕರು ಹೆಚ್ಚು ಹೆಚ್ಚು ದೇಶ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು.ಇದಕ್ಕಾಗಿ ಈಗಲೇ ವ್ಯಕ್ತಿತ್ವ ನಿರ್ಮಾಣವನ್ನು ಮಾಡಿಕೊಳ್ಳಿ ಎಂದು ಕೇರಳದ ನಿವೃತ್ತ ಡಿವೈಎಸ್ ಪಿ ಶ್ರೀರಾಮ ತಲೆಂಗಳ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ )ಮಹಾವಿದ್ಯಾಲಯ ಇಲ್ಲಿ 4/9 ಕರ್ನಾಟಕ ಬೆಟಾಲಿಯಾನ್ ಎನ್ ಸಿ ಸಿ ಮಡಿಕೇರಿ ಮತ್ತು ಕಾಲೇಜಿನ ಐಕ್ಯೂಎಸಿ ಹಾಗೂ ಎನ್ ಸಿ ಸಿ ಘಟಕವು ಜಂಟಿಯಾಗಿ ಆಯೋಜಿಸಿದ ಸಶಸ್ತ್ರ ಪಡೆಯಲ್ಲಿ ವ್ಯಕ್ತಿತ್ವ ಅಭಿವೃದ್ಧಿ ಮತ್ತು ವೃತ್ತಿ ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಎನ್ ಸಿ ಸಿ ಅಧಿಕಾರಿ ಕ್ಯಾಪ್ಟನ್ ಭಾಮಿ ಅತುಲ್ ಶೆಣೈ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ