ಹೋಟೆಲ್ ಉದ್ಯಮ ಸ್ನೇಹಿ ನೀತಿ ಅಗತ್ಯ: ಡಾ. ಪೆರ್ಲ

Upayuktha
0

ಹೋಟೆಲ್ ಪಂಚಮಿ ಎರಡನೇ ಶಾಖೆ ಶುಭಾರಂಭ



ಕಲಬುರಗಿ: ರಾಜ್ಯದ ಆರ್ಥಿಕತೆಗೆ ಹೋಟೆಲ್ ಉದ್ಯಮದ ಕೊಡುಗೆ ಅಪಾರವಾಗಿದ್ದು ಸರಕಾರವು ಹೋಟೆಲ್ ಉದ್ಯಮ ಸ್ನೇಹಿ ನೀತಿ ಅನುಸರಿಸಿ ಉತ್ತೇಜನ ನೀಡಬೇಕು ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಮಾಧ್ಯಮ ತಜ್ಞ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.


ಕಲಬುರಗಿಯ ಗುಬ್ಬಿ ಕಾಲನಿಯ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಪಂಚಮಿ ಹೋಟೆಲ್ ಗ್ರೂಪಿನ ಎರಡನೇ ಶಾಖೆಯನ್ನು ಮಾ.3 ರಂದು ಉದ್ಘಾಟನೆ ಮಾಡಿ ಮಾತನಾಡಿ ಪ್ರವಾಸೋದ್ಯಮ ರಂಗದ ಬೆನ್ನೆಲುಬು ಹೋಟೆಲ್ ಉದ್ಯಮವಾಗಿದ್ದರೂ ಸರಕಾರದ ಕಠಿಣ ನೀತಿಯಿಂದ ಉದ್ಯಮಿಗಳು ಈ ರಂಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನೂರಾರು ಇಲಾಖೆಗಳು ಮಧ್ಯೆ ಪ್ರವೇಶಿಸಿ ಸುಗಮ ನಿರ್ವಹಣೆಗೆ ಅಡ್ಡಿ ಎದುರಿಸುತ್ತಿದ್ದು ಉದ್ಯಮಿಗಳು ಬೇಸತ್ತಿದ್ದಾರೆ. ಉದ್ಯಮ ಸ್ನೇಹಿ ನೀತಿ ಅನುಸರಿಸಿದರೆ ಮಾತ್ರ ಹೋಟೆಲ್ ಉದ್ಯಮ ರಂಗವು ಬೆಳೆದು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೋಟೆಲ್ ಉದ್ಯಮಿ ಜೀವನ್ ಕುಮಾರ್ ಜತ್ತನ್ ಮಾತನಾಡಿ, ಗ್ರಾಹಕರಿಗೆ ಆರೋಗ್ಯ ಪೂರ್ಣ ಆಹಾರ ಪೂರೈಕೆ ಹೋಟೆಲ್ ಉದ್ಯಮದ  ಪರಮ ಗುರಿ. ಕರಾವಳಿ ಹೋಟೆಲ್ ಉದ್ಯಮಿಗಳು ಈ ರಂಗದಲ್ಲಿ ಅನುಭವಸ್ಥರಾಗಿದ್ದು ಈ ರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಎಂದು ಹೇಳಿದರು.


ಹೋಟೆಲ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಮೆಂಡನ್ ಮಾತನಾಡಿ ಜಿಲ್ಲೆಯಲ್ಲಿ ಹೋಟೆಲ್ ಉದ್ಯಮ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದೆ. ಕಾರ್ಪೊರೇಷನ್, ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಪೂರ್ಣ ನೆರವು ನೀಡಿದರೆ ಇನ್ನಷ್ಟು ಪ್ರಗತಿ ಹೊಂದಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಆರ್ ಹೊನಗುಂಟಿ, ಬಿಜೆಪಿ ಅಲ್ಲಿಂದ ತಾಲೂಕು ಮಾಜಿ ಅಧ್ಯಕ್ಷ ಆನಂದ್ ಕೆ ಪಾಟೀಲ್, ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಎನ್ ಕಾಂಬಳೆ, ಇಂಜಿನಿಯರ್ ಮಾಣಿಕ್ ರಾವ್ ಕಣಕಂಟೆ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಸದಸ್ಯೆ ಮಾಲಾ ಕಣ್ಣಿ, ಶ್ಯಾಮ್ ಪೂಜಾರಿ, ಹೋಟೆಲ್ ಉದ್ಯಮಿ ಶ್ರೀನಿವಾಸ ಓಕುಡೆ, ಮಲ್ಲಿಕಾರ್ಜುನ ಬಿರಾದಾರ್ ಸತ್ಯಾನಂದ, ಯತೀಶ್ ಪೂಜಾರಿ, ಅನೀಶ್ ಕಡೇಚೂರ್, ಸುನಿಲ್ ಶೆಟ್ಟಿ, ಮಹಾಕೀರ್ತಿ ಶೆಟ್ಟಿ, ಸತೀಶ್ ಪೂಜಾರಿ ಇದ್ದರು. ಪಂಚಮಿ ಹೋಟೆಲ್ ಮಾಲಕ ಸಂತೋಷ್ ಪೂಜಾರಿ ಸ್ವಾಗತಿಸಿದರು, ಅತಿಥಿಗಳನ್ನು ಗೌರವಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top