ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ 16ನೇ ಬಜೆಟ್ ಬಗ್ಗೆ ಬಹು ನಿರೀಕ್ಷೆ ಇತ್ತು. ಆದರೆ ರಾಜ್ಯದ ಬಹುಮುಖ್ಯವಾಗಿ ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ಅನುದಾನವುಾ ಇಲ್ಲ ಶಾಶ್ವತ ಅಭಿವೃದ್ಧಿಯ ಮಾತುಗಳೇ ಇಲ್ಲ. ಬದಲಾಗಿ ಉಡುಪಿಯಲ್ಲಿ ಅವರಿಗೆ ಕಂಡಿದ್ದು ಭೂಕುಸಿತ ಮಾತ್ರ. ಸಮಗ್ರ ಬಜೆಟ್ ನಲ್ಲಿ ಕಂಡ ಬಹು ಆಘಾತಕಾರಿ ಅಂಶವೆಂದರೆ ಬಹು ಮುಖ್ಯವಾಗಿ ಬಜೆಟ್ ಉದ್ದಕ್ಕೂ ಪ್ರಸ್ತಾವನೆಯಾಗಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಲ್ಪ ಸಂಖ್ಯಾ ಮತಿಯ ಲೆಕ್ಕಾಚಾರ. ಇದು ರಾಜ್ಯದ ಸಮಗ್ರ ಆರ್ಥಿಕ ಅಭಿವೃದ್ಧಿಯ ಏಕತೆಗೆ ಬಹುದೊಡ್ಡ ಹೊಡೆತ. ಅನುದಾನ ಹಂಚುವಾಗ ವಿವಿಧ ವಲಯಗಳಿಗೆ ಒತ್ತು ಕೊಡ ಬೇಕೇ ವಿನಾ ಜಾತಿ ಧರ್ಮವನ್ನು ನೇೂಡಿ ಹಂಚಬಾರದು.
ಗುತ್ತಿಗೆ ನೀಡುವಲ್ಲಿ, ಕೈಗಾರಿಕಾ ಭೂಮಿ ಹಂಚಿಕೆಯಲ್ಲೂ ಶಿಕ್ಷಣ ಸವಲತ್ತುಗಳನ್ನು ನೀಡುವಾಗಲೂ ಬರೇ ಜಾತಿ ಮತಿಯ ವಿಷಯಗಳನ್ನು ಮಂಡಿಸುವುದು ಸರಿಯಲ್ಲ. ಅಂದರೆ ಕಾಮಗಾರಿಯಲ್ಲಿನ ಗುಣಮಟ್ಟ ಮುಖ್ಯವೇ ಹೊರತು ಜಾತಿ ಮತೀಯ ಆಧಾರದಲ್ಲಿ ಹಣ ಹಂಚುವುದು ಸರಿಯಲ್ಲ. ಈ ರೀತಿಯ ಬಜೆಟ್ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಲಕ್ಷಣಗಳು ಈ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಅಂತೂ ಸಿದ್ದರಾಮಯ್ಯ ತಾನು "ಅಹಿಂದ" ವಾಸಿ ಅನ್ನುವುದನ್ನು ತಮ್ಮ ಬಜೆಟ್‌ನಲ್ಲಿ ಸ್ವಷ್ಟವಾಗಿ ಪ್ರತಿಪಾದಿಸಿದ್ದಾರೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥರು
ಎಂಜಿಎಂ ಕಾಲೇಜು ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ