ಒಡಿಯೂರು ಶ್ರೀಗಳಿಂದ "ಬಂಗಾರ ಪಿಂಗಾರ" ಬಿಡುಗಡೆ

Upayuktha
0


ಮಂಗಳೂರು: "ತುಳು ಮಣ್ಣು ವಿಶಿಷ್ಟವಾದುದು. ತುಳು ಭಾಷೆ ಇನ್ನಿತರ ಭಾಷೆಗಳ ಮಧ್ಯೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ತನ್ನತನವನ್ನು ಮೆರೆದಿದೆ. ಇಂದು ತುಳು ನಮ್ಮಿಂದ ಮರೆಯಾಗದಂತೆ ಮೆರೆಸಬೇಕಾದುದು ತೌಳವರಾಗಿ ನಮಗೆ ಕರ್ತವ್ಯವೂ ಹೌದು. ತುಳುಕೂಟ ಕುಡ್ಲ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರತರುತ್ತಿರುವ" ಬಂಗಾರ ಪಿಂಗಾರ" ಸ್ಮರಣೆ ಸಂಚಿಕೆ ಎಲ್ಲಾ ತುಳುವರಿಗೂ ತಲುಪಲಿ. ಯಾಕೆಂದರೆ ತುಳುಕೂಟ ಸಾಹಿತ್ಯ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ನೆನಪುಗಳ ಅಂಗಳದಿಂದ ಜಗದಂಗಳಕ್ಕೆ ವ್ಯಾಪಿಸಲಿರುವ ಈ ಸ್ಮರಣ ಸಂಚಿಕೆ ತುಳುಜ್ಞಾನವನ್ನು ಯುವ ಪೀಳಿಗೆಗೆ ಪಸರಿಸುವಂತಾಗಲಿ" ಎಂದು ಶ್ರೀ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಪುರಭವನದಲ್ಲಿ ತುಳುಕೂಟದ ವತಿಯಿಂದ ಜರಗಿದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನವಿತ್ತರು. ಸಮಾರಂಭದಲ್ಲಿ ಅತಿಥಿಗಳಾಗಿ ಎ.ಸಿ ಭಂಡಾರಿ, ಶ್ರೀ ಬಾಲಕೃಷ್ಣ ಕೊಟ್ಟಾರಿ, ಪ್ರದೀಪ ಕುಮಾರ್ ಕಲ್ಕೂರ ಪ್ರೊ// ಎಂ.ಬಿ. ಪುರಾಣಿಕ್, ಹೇಮಾ ದಾಮೋದರ ನಿಸರ್ಗ, ರೊ. ಜೆ.ವಿ. ಶೆಟ್ಟಿ ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಚಂದ್ರಶೇಖರ ಸುವರ್ಣ ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿದರು. ಬಳಿಕ "ರೆಂಜೆ ಬನೊತ ಲೆಕ್ಕೆಸಿರಿ" ಎಂಬ ಯಕ್ಷಗಾನ ಹಾಗೂ ದೈವದ ಬೂಳ್ಯ ಎಂಬ ತುಳು ನಾಟಕಗಳು ಪ್ರದರ್ಶನಗೊಂಡವು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top