ಆದರ್ಶ ರಾಮರಾಜ್ಯ ರೂಪಿ ಹಿಂದೂರಾಷ್ಟ್ರದ ಸ್ಥಾಪನೆ- ನಮ್ಮ ಪಾತ್ರ

Upayuktha
0



ಪ್ರಸ್ತಾವನೆ : ನೂರಾರು ವರ್ಷಗಳ ಸುದೀರ್ಘ ಸಂಘರ್ಷದ ನಂತರ ಕೊನೆಗೆ ಜನವರಿ 2024 ರಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ವಿರಾಜಮಾನರಾದರು. ಪ್ರಭು ಶ್ರೀರಾಮ ಅಯೋಧ್ಯಾಪತಿಯಾದ ನಂತರ ಪೃಥ್ವಿಯಲ್ಲಿ ರಾಮರಾಜ್ಯ ಅವತರಿಸಿತ್ತು. 


ಶ್ರೀರಾಮ ಮಂದಿರದ ನಿರ್ಮಾಣದ ನಂತರ ಈಗ ಹಿಂದೂಗಳ ಮನದಲ್ಲಿ ರಾಮರಾಜ್ಯ ರೂಪಿ ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯಾಸ ತಗಲಿದೆ. ಕೆಲವು ವರ್ಷಗಳ ಹಿಂದೆ ‘ಹಿಂದೂ ರಾಷ್ಟ್ರ’ ಈ ಶಬ್ದದ ಉಚ್ಚಾರಣೆಯೂ ಅಪರಾಧವೆಂಬ ಪರಿಸ್ಥಿತಿಯಿತ್ತು; ಆದರೆ ಈಗ ಹಿಂದೂ ರಾಷ್ಟ್ರದ ಚರ್ಚೆ ಕೇವಲ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಕೇಳಿ ಬರುತ್ತಿದೆ. ಇದು ಕಾಲದ ಮಹಿಮೆಯೇ ಆಗಿದೆ. ಯಾವುದಾದರೂ ಘಟನೆ ಸ್ಥೂಲದಲ್ಲಿ ಘಟಿಸುವ ಮೊದಲು ಸೂಕ್ಷ್ಮದಲ್ಲಿ ಘಟಿಸಿರುತ್ತದೆ, ಎಂದು ಶಾಸ್ತ್ರ ಹೇಳುತ್ತದೆ. 


ರಾಮಾಯಣ ಘಟಿಸುವ ಮೊದಲೇ ಅದನ್ನು ವಾಲ್ಮೀಕಿ ಋಷಿಗಳು ಬರೆದಿದ್ದರು. ಶ್ರೀರಾಮ ಮಂದಿರದ ನಿರ್ಮಾಣವೆಂದರೆ ಸೂಕ್ಷ್ಮದಲ್ಲಿ ರಾಮರಾಜ್ಯದ ಅಂದರೆ ‘ಹಿಂದೂ ರಾಷ್ಟ್ರ’ದ ಪ್ರಾರಂಭವೇ ಆಗಿದೆ. ಯಾವ ಶ್ರೀರಾಮನಿಗಾಗಿ ವಿಶ್ವಾದ್ಯಂತದ ಹಿಂದೂ ಭಕ್ತರು ಜಾತಿ-ಪಂಥ-ಪಕ್ಷ-ಸಂಪ್ರದಾಯ ಮುಂತಾದ ಎಲ್ಲಾ ಭೇದಗಳನ್ನು ಮರೆತು ಉತ್ಸಾಹದಲ್ಲಿ ಒಂದಾದರೋ, ಅದೇ ರೀತಿಯ ಸಂಘಟನೆ, ಸಮರ್ಪಣೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಗಬೇಕಿದೆ. ರಾಮರಾಜ್ಯರೂಪಿ ಹಿಂದೂ ರಾಷ್ಟ್ರಕ್ಕಾಗಿ ಆರಂಭವಾಗುತ್ತಿರುವ ಜನಾಂದೋಲನವು ಯಥಾಶೀಘ್ರ ಸಂಪೂರ್ಣವಾಗಿ ಸಫಲವಾಗಬೇಕೆಂದು  ಎಲ್ಲರ ಪ್ರಾರ್ಥನೆಯಾಗಿದೆ.


ಹಿಂದೂ ರಾಷ್ಟ್ರದ ಪರಿಕಲ್ಪನೆ : ಹಿಂದೂ ರಾಷ್ಟ್ರದ ಪರಿಕಲ್ಪನೆ ಇದು ರಾಜಕೀಯವಲ್ಲ, ಧರ್ಮಾಧಿಷ್ಠಿತವಾಗಿದೆ. ಕೇವಲ ‘ಸೆಕ್ಯುಲರ್’ ಪದದ ಬದಲು ‘ಹಿಂದೂ ರಾಷ್ಟ್ರ’ ಈ ಶಬ್ದ ಸಂವಿಧಾನದಲ್ಲಿ ಸೇರಿಸುವುದಷ್ಟಕ್ಕೆ ಸೀಮಿತವಾಗಿಲ್ಲ, ಹಿಂದೂ ರಾಷ್ಟ್ರ ಇದು ಒಂದು ಆದರ್ಶ ರಾಜ್ಯ ವ್ಯವಸ್ಥೆಯಾಗಿದೆ. 


ಆದರ್ಶ ರಾಜ್ಯ ವ್ಯವಸ್ಥೆಯ ಮಾನದಂಡ ರಾಮ ರಾಜ್ಯದಲ್ಲಿ ಹಾಕಿ ಕೊಡಲಾಗಿದೆ. ಇಂದು ಲಕ್ಷಾಂತರ ವರ್ಷ ಕಳೆದರೂ, ತ್ರೇತಾಯುಗದ ರಾಮರಾಜ್ಯ ‘ಜನರಿಗೆ ನೆನಪಿದೆ; ಯಾಕೆಂದರೆ ಆಗ ಧರ್ಮದ ಅಧಿಷ್ಠಾನವಿತ್ತು. ಆದ್ದರಿಂದ ರಾಮರಾಜ್ಯದಲ್ಲಿನ ನಾಗರಿಕರು ಸುಸಂಸ್ಕೃತರು ಸುಖಿಗಳು ಮತ್ತು ಸಮಾಧಾನಿಗಳಾಗಿದ್ದರು. ಅಲ್ಲಿ ಭ್ರಷ್ಟಾಚಾರ, ರೋಗರುಜಿನ, ನೈಸರ್ಗಿಕ ಆಪತ್ತು ಮುಂತಾದವುಗಳಿಗೆ ಅವಕಾಶ ಇರಲಿಲ್ಲ. 


‘ಶ್ರೀ ರಾಮನ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಕುಂದು ಕೊರತೆ ನೋಡಲು ಸಿಗಲಿಲ್ಲ, ಹೀಗೆ ರಾಮ ರಾಜ್ಯದ ವರ್ಣನೆ ವಾಲ್ಮೀಕಿ ಋಷಿಗಳು ರಾಮಾಯಣದಲ್ಲಿನ ಯುದ್ಧಕಾಂಡದಲ್ಲಿ ಬರೆದಿಟ್ಟಿದ್ದಾರೆ. ಇಂತಹ ರಾಮರಾಜ್ಯ ಆಗಿಹೋಗಿರುವ ಈ ಪವಿತ್ರ ಭೂಮಿಯಲ್ಲಿ ಪುನಃ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಜಯಘೋಷ ಮೊಳಗಿಸಲು ಕಳೆದ 11 ವರ್ಷಗಳಿಂದ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ’ ಪ್ರಯತ್ನಿಸಲಾಗುತ್ತಿದೆ. ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳ ರಾಷ್ಟ್ರ ಅಲ್ಲ, ಅದು ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸಾತ್ತ್ವಿಕ ಜನರ ರಾಷ್ಟ್ರ .


ಹಿಂದೂ ರಾಷ್ಟ್ರದ ಆವಶ್ಯಕತೆ : ಇಂದಿನ ಸೆಕ್ಯುಲರ್ (ಜಾತ್ಯಾತೀತ) ವ್ಯವಸ್ಥೆ ಹಿಂದೂಗಳ ದಮನ ಮಾಡುವ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವಂತಹದ್ದಾಗಿದೆ. ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಲಾಗುತ್ತಿದೆ. 


ದೇವಸ್ಥಾನಗಳ ದೇವನಿಧಿಯನ್ನು ಇತರೆ ಪಂಥದವರಿಗಾಗಿ ಉಪಯೋಗಿಸಲಾಗುತ್ತಿದೆ; ಆದರೆ ಇತರೆ ಪಂಥದವರ ಪ್ರಾರ್ಥನಾಸ್ಥಳಗಳ ಸರಕಾರೀಕರಣವಾಗುವುದಿಲ್ಲ. ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವರು-ದೇಶ- ಧರ್ಮದ ರಕ್ಷಣೆಗಾಗಿ ಜಾಗೃತಿಗೊಳಿಸುವುದೆಂದರೆ ‘ಹೇಟ್ ಸ್ಪೀಚ್’ ಎಂದು ಪರಿಗಣಿಸುವ ಘಟನೆಗಳು ನಡೆಯುತ್ತವೆ; ಈ ಎಲ್ಲ ಘಟನೆಗಳು ಜಾತ್ಯಾತೀತ ವ್ಯವಸ್ಥೆಯ ಸೋಲನ್ನು ಪ್ರತಿಬಿಂಬಿಸುತ್ತದೆ ಮತ್ತು ಎಲ್ಲರಿಗೂ ನ್ಯಾಯ ಕೊಡುವ ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ಬಿಂಬಿಸುತ್ತಿದೆ. 


ಹಿಂದೂ ಧರ್ಮ, ಹಾಗೆಯೇ ರಾಷ್ಟ್ರದ ಮೇಲಾಗುವ ಆಘಾತಗಳಿಗೆ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯೊಂದೇ ಏಕಮೇವ ಉತ್ತರವಾಗಿದೆ. ಹೇಗೆ ‘ಹಿಂದವೀ ಸ್ವರಾಜ್ಯ’ ಸ್ಥಾಪನೆಯಾದ ಬಳಿಕ ಇಸ್ಲಾಮಿ ಅತಿಕ್ರಮಣ ಕೊನೆಗೊಂಡಿತೋ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೇ ಸದ್ಯದ ಅರಾಜಕತೆ ನಿಲ್ಲುವುದು ಖಚಿತವಾಗಿದೆ.


ಪ್ರಾಂತೀಯ ಅಧಿವೇಶನದ ಆಯೋಜನೆ :

ಇದೇ ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆಯನ್ನಿಟ್ಟುಕೊಂಡು ಸಮಸ್ತ ಹಿಂದೂ ಸಂಘಟನೆಗಳು, ಹಿಂದುತ್ವಕ್ಕಾಗಿ ಹೋರಾಡುವ ವಕೀಲರು, ಹಿಂದುತ್ವನಿಷ್ಠ ವೈದ್ಯರು ಮತ್ತು ಧರ್ಮಪ್ರೇಮಿ ಉದ್ಯಮಿಗಳನ್ನು ಸಂಘಟಿಸಲು ಇದೇ ಮಾರ್ಚ್ 16 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿದೆ. 


ಈ ಅಧಿವೇಶನದಲ್ಲಿ ಸದ್ಯ ರಾಜ್ಯದಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಉಪಾಯ, ವಕ್ಫ್ ಕಾಯ್ದೆ, ಲವ್ ಜಿಹಾದ್, ಹಲಾಲ್ ಜಿಹಾದ್ ಇಂತಹ ಸಮಸ್ಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿ ಧ್ವನಿ ಎತ್ತಬೇಕಿದೆ ಎಂಬುದರ ಕಾರ್ಯಯೋಜನೆ ರೂಪಿಸಲಾಗುವುದು. ಸುಮಾರು 8೦೦ ಕ್ಕೂ ಅಧಿಕ ಹಿಂದೂ ಪ್ರಮುಖರು ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಅಧಿವೇಶನ HJSKarnataka  ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ ಆಗಲಿದೆ. 


- ಮೋಹನ ಗೌಡ,

ರಾಜ್ಯ ವಕ್ತಾರರು, 

ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top