ನಿಗೂಢವಾಗಿ ಕಾಣೆಯಾಗಿರುವ ದಿಗಂತ್ ಸುರಕ್ಷಿತವಾಗಿ ಪತ್ತೆ

Upayuktha
0


ಬಂಟ್ವಾಳ: ಫೆ.25 ರಂದು ಮನೆಯ ಹತ್ತಿರದ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿಬರುತ್ತೇನೆಂದು ಹೇಳಿ ಹೋಗಿದ್ದ ಪಿ.ಯು. ವಿದ್ಯಾರ್ಥಿ ದಿಗಂತ್ ಕ್ಷೇಮವಾಗಿ ಪತ್ತೆಯಾಗಿದ್ದಾನೆಂದು ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


ಕಾಣೆಯಾದಂದು ಆತನ ಚಪ್ಪಲಿ ಮೊಬೈಲ್ ಪತ್ತೆಯಾದ ಬಳಿಕ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಫರಂಗಿಪೇಟೆಯಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದು ಶೀಘ್ರವಾಗಿ ಪತ್ತೆ ಹಚ್ಚುವಂತೆ ಒತ್ತಾಯಿಸಲಾಗಿತ್ತು.


ವಿಶ್ವಹಿಂದು ಪರಿಷತ್, ವಿದ್ಯಾರ್ಥಿ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಕಳೆದ ಹನ್ನೆರಡು ದಿನಗಳಿಂದ ವಿದ್ಯಾರ್ಥಿ ಕಾಣೆಯಾಗಿರುವುದನ್ನು ಪತ್ತೆ ಮಾಡದಿರುವ ಪೊಲೀಸ್ ಇಲಾಖೆಯ ಬಗ್ಗೆ ಆರೋಪ ಮಾಡಿದ್ದು ಮಾ.10 ರ ಒಳಗೆ ಪತ್ತೆಯಾಗದಿದ್ದಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದವು.


ಕರಾವಳಿ ಭಾಗದಲ್ಲಿಯೇ ಬಾಲಕ ಪತ್ತೆಯಾಗಿದ್ದು, ಮನೆ ಸೇರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top