ಯುಗಾದಿ ಹಬ್ಬ ಬಂದಾಗ ನಮಗೆ ನಿಸರ್ಗದ ಬದಲಾವಣೆಗಳನ್ನು ನೋಡಿದಾಗ ನಮಗೆ ಈ ನುಡಿ ನಮಗೆ ಗೊತ್ತಿಲ್ಲದಂತೆ ಅನಿಸಲಿಕ್ಕೆ ಶುರು ಆಗುತ್ತದೆ.
ಯುಗಾದಿ ಹಬ್ಬ ಬರುತ್ತಿರುವಾಗಲೇ ನಿಸರ್ಗದಲ್ಲಾದ ಬದಲಾವಣೆಗಳನ್ನು ಗಮನಿಸಬಹುದು. ಮರಗಳು ಹಳೇ ಎಲೆಗಳನ್ನು ಉದುರಿಸಿ ಹೊಸ ಚಿಗುರು. ಮತ್ತು ಎಲೆಗಳಿಂದ ಹೊಸತನ ಮೂಡಿಸಿಕೊಂಡು ಬೀಗಲು ಶುರು ಮಾಡುತ್ತವೆ.
ಇಲ್ಲಿ ನಿಸರ್ಗವು ನಮಗೆ ಕೊಡುತ್ತಿರುವ ಮೆಸೇಜನ್ನು ಅವಲೋಕಿಸಿ ನೋಡಬಹುದು. ಬೇಡವಾದ, ಸಂಗತಿಗಳನ್ನು, ಆಲೋಚನೆಗಳನ್ನು ಬಿಟ್ಟು ಹೊಸತನವನ್ನು ರೂಢಿಸಿಕೊಂಡು ಬದುಕಬೇಕು ಅನ್ನುವ ಮೆಸೇಜ್ ಕಾಣಬಹುದು.
ಅದಕ್ಕೆ ಕವಿ ಬೇಂದ್ರೆಯಯವರು "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸತನವ ತರುತಿದೆ" ಎಂದು ಹಾಡಿದ್ದಾರೆ. ಕಂಪ್ಯೂಟರ್, ಮೊಬೈಲ್‌ನಲ್ಲಿ ಇದ್ದಂತೆ ನಮ್ಮ ಜೀವನದಲ್ಲೂ restart ಮತ್ತು delete button ಅಳವಡಿಸಿಕೊಳ್ಳಬೇಕು.
ಇದರಿಂದ ನಮ್ಮ ಜೀವನದಲ್ಲಿ ಬೇಡವಾದ ಸಂಗತಿಗಳನ್ನೂ ಡಿಲೀಟ್ ಮಾಡಿ ಪ್ರತಿ ದಿನ ನಮ್ಮ ಜೀವನವನ್ನು restart ಮಾಡಿಕೊಳ್ಳಬಹುದು. ನಮಗೆ ಪ್ರತಿದಿನವೂ ನಮ್ಮ ಪಾಲಿಗೆ restart button ಆದ್ದ ಹಾಗೆ.
ನಮ್ಮ ಜೀವನದಲ್ಲೂ ನಮ್ಮ ಸಂಸ್ಕೃತಿ ಎಂಬ ಹಳೇ ಬೇರುಗಳೊಂದಿಗೆ ಹೊಸತನ, ಕ್ರಿಯಾಶೀಲತೆ ಎಂಬ ಹೊಸ ಚಿಗುರುಗಳೊಂದಿಗೆ ನಮ್ಮ ಜೀವನ ಸೊಗಸು ಮಾಡಿಕೊಳ್ಳಬಹುದು.
ನಮ್ಮ ಮನೆಯನ್ನು ಹೇಗೆ. ಪ್ರತಿ ದಿನ ಕಸ ಗುಡಿಸಿ ಕಸ ಹೊರಗೆ ಎಸೆಯುತ್ತಾರೋ ಹಾಗೆ ನಮ್ಮ ತಲೆಯಿಂದ ಮತ್ತು ನಮ್ಮ ಜೀವನದಿಂದ.expired ಮತ್ತು outdated ಆದ ಸಂಗತಿಗಳನ್ನು ಹೊರಗೆ ಕಳಿಸಿದರೆ ಒಳ್ಳೆಯ ಸಂಗತಿಗಳು ಒಳಗೆ ಬಂದು ನಮ್ಮ. ಜೀವನವು ಅರ್ಥಪೂರ್ಣ ವಾಗಿರಲಿಕ್ಕೆ ಸಾಧ್ಯ.
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ