ಮೂಡುಬಿದಿರೆ: ನಮ್ಮ ಮನೆಯನ್ನು ಸ್ವಚ್ಛ ಇಡಲು ಸುತ್ತಲೂ ಆವರಣದ ಗೋಡೆ ಕಟ್ಟುವ ನಾವು ನೀರು, ಗಾಳಿ, ಮಣ್ಣು ಎಲ್ಲಾ ಜನರು ಹಂಚಿಕೊಂಡು ಬದುಕುವ ಸತ್ಯವನ್ನು ನೆನಪಿಡಬೇಕು. ನನ್ನ ಧರ್ಮ, ನಮ್ಮ ಜಾತಿಗಳು ಶ್ರೇಷ್ಠ ಮಾಡುವಾಗ ಇತರ ಜಾತಿ ಧರ್ಮವನ್ನು ಗೌರವದಿಂದ ನೋಡಲು ಕಲಿಯಬೇಕು. ಜಾತಿ ಧರ್ಮಗಳಿಗಿಂತ ಜೀವ ಒಂದು ಬದುಕಿಸುವುದು ಶ್ರೇಷ್ಠ ಕಾರ್ಯ ಎಂದು ಝೋನ್ ಹದಿನೈದರ ಹಿರಿಯ ತರಬೇತುದಾರ ಜೇಸಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಮೂಡುಬಿದಿರೆ ಜೈನ ಪ್ರೌಢಶಾಲಾ 125 ವಿಧ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ತರಬೇತಿ ನೀಡಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶಾಮ್‌ಪ್ರಸಾದ್ ಕೆ ತರಬೇತಿಯನ್ನು ಚಾಲನೆ ಮಾಡಿ ನಮ್ಮ ಸಂಸ್ಥೆಯ ನಲ್ವತ್ತು ವರ್ಷಗಳ ಹಳೆಯ ವಿದ್ಯಾರ್ಥಿ ಹಿರಿಯ ಪತ್ರಕರ್ತ, ಸಾಹಿತಿ ಆಗಿ ಸಾಧನೆ ಮಾಡಿ ಇಂದಿನ ವಿದ್ಯಾರ್ಥಿಗಳು ಅನುಸರಿಸುವ ರೀತಿಯಲ್ಲಿ ಬೆಳೆದ ಬಗ್ಗೆ ಹೆಮ್ಮೆ ಇದೆ ಎಂದರು.
ವಲಯ ತರಬೇತುದಾರರಾದ ಜೇಸಿ ನಿತೇಶ್ ಬಳ್ಳಾಲ್, ಜೇಸಿ ಅಜಿತ್ ಪ್ರಸಾದ್, ಜೇಸಿ ವಿನಯ ಚಂದ್ರ ತರಬೇತಿಯನ್ನು ಮುಂದುವರೆಸಿದರು. ಹಿರಿಯ ಶಿಕ್ಷಕರಾದ ವಿನಯಚಂದ್ರ ಸ್ವಾಗತಿಸಿದರು. ಶಿಕ್ಷಕಿಯರಾದ ವಿಜಯ ಪದ್ಮ ಸಹಕರಿದರು, ಮಾಧುರಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ