ಮನೆಮನೆಯಲ್ಲೂ ಸಾಹಿತ್ಯ ಸಂಭ್ರಮ ನಡೆಯಲಿ

Upayuktha
0



ಮಂಗಳೂರು: ಯಾರು ಬರೆದರೂ ಅವರ ಕಿಂಚಿತ್ತಾದರೂ ಅನುಭವ ಅದರಲ್ಲಿ ಇದ್ದರೆ ಜನರು ಸುಲಭವಾಗಿ ಮೆಚ್ಚಿಕೊಳ್ಳುವ ಸಾಹಿತ್ಯ ಅದಾಗುತ್ತದೆ ಎಂದು ಮಣಿಪಾಲ ಟಿಎಂಎ ಪೈ ಫೌಂಡೇಶನ್ ಇದರ ಪನ್ವಾ‌ರ್ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ನುಡಿದರು.


ಅವರು ಮಣಿಪಾಲದ ದಶರಥನಗರ ಬಡಾವಣೆಯ ಮೂರನೇ ಅಡ್ಡ ರಸ್ತೆಯಲ್ಲಿ ಆಂಟನಿ ಲೂಯಿಸ್ ಅವರ ಅಂಗಳದಲ್ಲಿ ನಡೆದ 24ನೇ ಪಿಂಗಾರ ಸಾಹಿತ್ಯೋತ್ಸವ ಹಾಗೂ ಪಂಚಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಗಝಲ್ ಓದಿ ಚಾಲನೆ ನೀಡಿದ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಸಾಹಿತಿ ವೈದ್ಯ ಸುರೇಶ ನೆಗಳಗುಳಿ ಮಾತನಾಡಿ, ಮನೆಯಲ್ಲಿ ಸಾಹಿತ್ಯ ಅಂದರೆ ಮನದಲ್ಲಿ ಉಳಿ ಯುವಂತಹದು. ದೊಡ್ಡದಾದ ಸಮ್ಮೇಳನದ ವಹಿವಾಟು ನಿಭಾಯಿಸಲು ಅದಕ್ಕೆ ವ್ಯಾಪಾರೀಕರಣದ ಒಂದಂಶ ಲೇಪಿತ ವಾಗುತ್ತದೆ. ಇದು ಅನಿವಾರ್ಯ ಕೂಡಾ ಆಗುತ್ತದೆ ಎಂದರು.


ಈ ಸಮಯದಲ್ಲಿ ಸಾಹಿತಿಗಳು ಗೂಗಲ್ ಬ್ಲಾಗ್, ಗೂಗಲ್ ಟೈಪ್ ಸಾಹಿತ್ಯ ಉಳಿಸಿಕೊಳ್ಳಲು ವಿವಿಧ ಮೊಬೈಲ್ ಟೂಲ್‌ಗಳ ಬಗ್ಗೆ ಕವಿ, ಆಂಗ್ಲ ಶಿಕ್ಷಕಿ ಪ್ರೇಮಾ ಶೆಟ್ಟಿ ವಿವರಿಸಿದರು. ಕಾರ್ಯಕ್ರಮ ಅಯೋಜಿಸಿದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ತನ್ನ ಇಂಗ್ಲಿಷ್, ತುಳು, ಕೊಂಕಣಿ, ಕನ್ನಡ ಹೀಗೆ ನಾಲ್ಕು ಭಾಷೆಯಲ್ಲಿ ಬರೆದ ವಿವಿಧ ಚುಟುಕು ವಾಚಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top