ಮಂಗಳೂರು: ಅಮೆಜಾನ್ ಇಂಡಿಯಾ ಕಂಪನಿಯು ಬೆಂಗಳೂರಿನ ಸರ್ಜಾಪುರ ರಸ್ತೆಯ ಬಳಿ ಇರುವ ಯಮರೆ ಗ್ರಾಮದಲ್ಲಿನ ಯಮರೆ ಕೆರೆ ಪುನರುಜ್ಜೀವನ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಸ್ತುತ ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಈ ಕೆರೆ ಪುನರುಜ್ಜೀವನ ಪೂರ್ಣಗೊಂಡ ಬಳಿಕ ಈ ಕೆರೆಯು ಸುಮಾರು 21 ಎಕರೆಗಳಿಗೆ ವಿಸ್ತಾರಗೊಳ್ಳಲಿದೆ.
ಸ್ಥಳೀಯ ಪರಿಸರ ಸಂಸ್ಥೆಯಾದ ಸೇ ಟ್ರೀಸ್ ಜೊತೆಗಿನ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೊಂಡಿರುವ ಅಮೆಜಾನ್ ಕಂಪನಿಯು ಈ ಕೆರೆಯಲ್ಲಿ ಪ್ರತೀ ವರ್ಷ 270 ದಶಲಕ್ಷ ಲೀಟರ್‍ಗಿಂತ ಹೆಚ್ಚು ನೀರನ್ನು ತುಂಬಿಸುವ ಯೋಜನೆ ಹಾಕಿಕೊಂಡಿದೆ. ಇದರಿಂದ ಸ್ಥಳೀಯ ಜನ ಸಮುದಾಯಕ್ಕೆ ಭಾರಿ ಪ್ರಯೋಜನ ಉಂಟಾಗಲಿದೆ. ಈ ಯೋಜನೆ ಮೂಲಕ ಭಾರತದಲ್ಲಿ ಅಮೆಜಾನ್ ಬಳಸುವ ನೀರಿಗಿಂತ ಹೆಚ್ಚಿನ ನೀರನ್ನು 2027ರ ವೇಳೆಗೆ ಮರಳಿ ಸಮಾಜಕ್ಕೆ ನೀಡುವ ಗುರಿ ಸಾಧಿಸಲಾಗುತ್ತದೆ ಎಂದು ಅಮೆಜಾನ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಅಭಿನವ್ ಸಿಂಗ್ ಹೇಳಿದ್ದಾರೆ.
ಅಮೆಜಾನ್ ಮತ್ತು ಸೇ ಟ್ರೀಸ್ ಯಮರೆ ಕೆರೆಯನ್ನು ಪುನರುಜ್ಜೀವನಗೊಳಿಸಲು ಜೊತೆಯಾಗಿ ಕೆಲಸ ಮಾಡುತ್ತಿದ್ದು, ಪುನರುಜ್ಜೀವನ ಯೋಜನೆ ಬಳಿಕ ಪ್ರಸ್ತುತ 0.6 ಎಕರೆ ಇರುವ ಈ ಕೆರೆ ಸುಮಾರು 21 ಎಕರೆಗಳಿಗೆ ವಿಸ್ತರಣೆ ಹೊಂದಲಿದೆ. ಈ ಯೋಜನೆ ಯಮರೆ ಕೆರೆಯನ್ನು ಸಮೃದ್ಧ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸುವುದಲ್ಲದೇ, ನೀರಿನ ಲಭ್ಯತೆ ಹೆಚ್ಚಿಸಲಿದೆ ಮತ್ತು ಅಂತರ್ಜಲ ಕಡಿಮೆಯಾಗುವುದನ್ನು ಗಣನೀಯವಾಗಿ ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ವಿವರಿಸಿದ್ದಾರೆ.
ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೇ ಟ್ರೀಸ್ ಸಂಸ್ಥೆಯ ಟ್ರಸ್ಟಿ ದಿಯೋಕಾಂತ್ ಪಯಾಸಿ, ಈ ಯೋಜನೆಗಳು ಸ್ಥಳೀಯ ಜನ ಸಮುದಾಯಗಳಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ಪರಿಸರ ವ್ಯವಸ್ಥೆಯ ಸಹಜ ಸಮತೋಲನವನ್ನು ಕಾಪಾಡುತ್ತವೆ ಎಂದು ಜೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ