ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಭರದ ಪ್ರಚಾರ

Upayuktha
0


ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್‌) ಅಧ್ಯಕ್ಷ ಸ್ಥಾನದ ಚುನಾವಣೆ ಏಪ್ರಿಲ್‌ 13ರಂದು ನಡೆಯಲಿದ್ದು, ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ ಆಯ್ಕೆಯಲ್ಲಿ ಶರ್ಮಾ ಬೆಂಬಲಿತ ಹಲವರು ಅವಿರೋಧ ಆಯ್ಕೆ ಆದಂತೆ ಘೋಷಣೆ ಒಂದೇ ಬಾಕಿಯಿದೆ. ಈ ಮೂಲಕ ಪ್ರಚಾರದ ಮೊದಲ ಹಂತದಲ್ಲೇ ಮೇಲುಗೈ ಸಾಧಿಸಿದ್ದಾರೆ.


ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಬೆಂಬಲದೊಂದಿಗೆ ಅಧ್ಯಕ್ಷಗಾದಿಗಾಗಿ ಕಣಕ್ಕೆ ಇಳಿದಿರುವ ಭಾನುಪ್ರಕಾಶ್ ಶರ್ಮಾ ಅವರ ಪರವಾಗಿ ನಿಂತಿರುವ ಹಲವರು ಜಿಲ್ಲಾ ಪ್ರತಿನಿಧಿಗಳಾಗಿ ಅವಿರೋಧ ಆಯ್ಕೆ ಆದಂತೆ 


ಕೊಡಗಿನಲ್ಲಿ ದುರ್ಗಾಪ್ರಸಾದ್‌, ಮಂಗಳೂರಿನಲ್ಲಿ ಮಹೇಶ್ ಕಜೆ, ಬಳ್ಳಾರಿಯಲ್ಲಿ ಡಾ. ಶ್ರೀನಾಥ್‌, ವಿಜಯನಗರದಲ್ಲಿ ಕೆ.ದಿವಾಕರ್‌, ಬೆಳಗಾವಿಯಲ್ಲಿ ಅಕ್ಷಯ ಕುಲಕರ್ಣಿ, ಚಿಕ್ಕಮಗಳೂರಿನಲ್ಲಿ ಜೆ.ಎಸ್.ಮಹಾಬಲ, ಗದಗದಲ್ಲಿ ಶ್ರೀನಿವಾಸ ಹುಯಿಲಗೋಳ, ಉತ್ತರ ಕನ್ನಡದಲ್ಲಿ ಶ್ರೀಪಾದ ನಾರಾಯಣ ರಾಯಸದ್‌- ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು. ಉಳಿದ ಜಿಲ್ಲೆಗಳಲ್ಲಿ ಚುನಾವಣೆ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ.


ದಿನ ಕಳೆದಂತೆ ಬೆಂಗಳೂರಿನ ಜತೆಗೆ ಇತರ ಜಿ‌ಲ್ಲೆಗಳಲ್ಲಿ ಪ್ರಚಾರದ ಜತೆಗೆ ಚುನಾವಣಾ ಕಾವು ಹೆಚ್ಚತೊಡಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top