- ಮೂಲಸ್ಥಾನ ಮದರು ಕಟ್ಟೆ ಮಹಾದ್ವಾರ ಲೋಕಾರ್ಪಣೆ
- ಸಂಭ್ರಮದ ಹಸಿರುವಾಣಿ ಹೊರೆಕಾಣಿಕೆ ಘೋಷಯಾತ್ರೆ
- ಕಣ್ಮನ ಸೆಳೆದ ಮಹಿಳೆಯರ ಕುಣಿತ ಭಜನಾ ಮೆರವಣಿಗೆ
ಮಧೂರು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಉಳಿಯತ್ತಡ್ಕ ಸಮೀಪದ ಮೂಲಸ್ಥಾನದಲ್ಲಿರುವ ಮದರುಕಟ್ಟೆ ಮಹಾದ್ವಾರವನ್ನು ಎಡನೀರು ಮಠಾಧೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಇಂದು (ಮಾ.26) ಲೋಕಾರ್ಪಣೆ ಮಾಡಿ, ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಮಧೂರು ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸೂರ್ಲು, ಉಮೇಶ್ ಗಟ್ಟಿ ಉಳಿಯ, ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಿತಿ ಗೌರವಾಧ್ಯಕ್ಷ ಆನಂದ ಮವ್ವಾರು, ಅಧ್ಯಕ್ಷ ವಸಂತ ಅಜೆಕ್ಕೋಡು, ಪ್ರಧಾನ ಕಾರ್ಯದರ್ಶಿ ಡಿ.ಶಂಕರ, ಗೌರವ ಸಲಹೆಗಾರ ರಾಧಾಕೃಷ್ಣ ಉಳಿಯತ್ತಡ್ಕ, ರಾಮಪ್ಪ ಮಂಜೇಶ್ವರ, ಡಿ. ಕೃಷ್ಣದಾಸ್, ಗೋಪಾಲ.ಡಿ, ಸುಧಾಕರ ಬೆಳ್ಳಿಗೆ, ಸುನಂದಾ ಟೀಚರ್, ಜಯಾ ರಾಮಪ್ಪ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾದ ಮಕ್ಕಳ, ಮಹಿಳೆಯರ ಕುಣಿತ ಭಜನೆ:
ಉಳಿಯತ್ತಡ್ಕ ಮೂಲಸ್ಥಾನದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಘೋಷಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಘೋಷಯಾತ್ರೆಯ ಅಂಗವಾಗಿ ಸ್ಥಳೀಯ ಭಜನಾ ಸಂಘಗಳ ಮಕ್ಕಳು ಸೇರಿದಂತೆ ಜಿಲ್ಲೆಯ ವಿವಿಧ ಭಜನಾ ಸಂಘಗಳ ಸಾವಿರಕ್ಕೂ ಅಧಿಕ ಮಹಿಳೆಯರು ಸಮವಸ್ತ್ರ ಧರಿಸಿ ನಡೆಸಿದ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ