ಮಂಗಳೂರು: ಅವಿಭಕ್ತ ಕುಟುಂಬವು ಸುಂದರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ನಮ್ಮ ಆಧುನಿಕ ಬದುಕು ನಾಲ್ಕು ಗೋಡೆಯ ನಡುವೆ ನಮ್ಮನ್ನು ಕಟ್ಟಿ ಹಾಕಿದೆ, ನೆರೆಮನೆಯ ಪರಿಚಯವೇ ಇಲ್ಲದೇ ನಾವುಗಳು ಜೀವಿಸುವಂತಾಗಿದೆ. ಅವಿಭಕ್ತ ಕುಟುಂಬ ಉಳಿಸುವುದು ನಮ್ಮೆಲ್ಲರ ಹೊಣೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಮಾರ್ ಬಿ. ನಾವೂರು ನುಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಶ್ರೀ ನಾರಾಯಣ ಗುರು ಕಾಲೇಜು, ಕುದ್ರೋಳಿಯ ಸಹಭಾಗಿತ್ವದಲ್ಲಿ ಮಾರ್ಚ್ 26 ರಂದು ನಡೆದ 'ಕೂಡು ಕುಟುಮ- ತತ್ತ್ ಪೋಯಿನ ಬಗೆ' ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕರಾದ ಡಾ. ಮಾಧವ ಎಂ.ಕೆ. ತುಳು ಪೀಠದ ನಿರಂತರ ಚಟುವಟಿಕೆಗಳನ್ನು ವಿವರಿಸುತ್ತಾ, ಶೈಕ್ಷಣಿಕ ಮಟ್ಟದಲ್ಲಿ ತುಳುವಿಗೆ ಸ್ಥಾನಮಾನ ಸಿಕ್ಕಷ್ಟು ಭಾಷೆ ಗಟ್ಟಿಯಾಗುತ್ತದೆ. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯ ವರೆಗೆ ತುಳು ಒಂದು ಪಠ್ಯವಾಗಿರುವುದು ತುಳುವಿನ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ ಎಂದರು.
'ಕೂಡು ಕುಟುಮ- ತತ್ತ್ ಪೋಯಿನ ಬಗೆ' ಎಂಬ ವಿಷಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮೀ ಪ್ರಸಾದ್ ರೈ ಉಪನ್ಯಾಸ ನೀಡಿದರು. ಅವಿಭಕ್ತ ಕುಟುಂಬದಲ್ಲಿ ಹಬ್ಬ ಆಚರಣೆಗಳು ವಿಶೇಷವಾಗಿತ್ತು. ಒಬ್ಬರನ್ನೊಬ್ಬರು ಅರ್ಥೈಸಿ ಬದುಕು ಕಟ್ಟಿಕೊಳ್ಳುವುದು ಸುಂದರವಾಗಿತ್ತು. ಒಂದೇ ಮನೆಯಲ್ಲಿ ಅಜ್ಜ ಅಜ್ಜಿ ತಂದೆ ತಾಯಿ ಚಿಕ್ಕಪ್ಪ ಚಿಕ್ಕಮ್ಮ ಮಕ್ಕಳು ಎಲ್ಲರೂ ಜೊತೆಯಾಗಿರುವ ವಾತಾವರಣ ಇವತ್ತು ಮಾಯವಾಗಿದೆ ಎಂದು ಅವಿಭಕ್ತ ಕುಟುಂಬದ ಪ್ರಾಮುಖ್ಯತೆಯನ್ನು ಮಕ್ಕಳಿಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯ ಶೆಟ್ಟಿ ಮಾತನಾಡಿ, ಭಾಷೆಯ ಉಳಿವು ನಮ್ಮೆಲ್ಲರ ಕರ್ತವ್ಯ ಎಂದರು. ತುಳು ಪೀಠದ ಸಲಹಾ ಸಮಿತಿ ಸದಸ್ಯರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಸಮಾಜ ಸೇವಕರಾದ ಲಯನ್ ಪ್ರಸಾದ್ ರೈ ಕಲ್ಲಿಮಾರ್ ಉಪಸ್ಥಿತರಿದ್ದರು. ಕುಮಾರಿ ಮೋಕ್ಷಾ ಸ್ವಾಗತಿಸಿದರು, ಕುಮಾರಿ ಮೋಕ್ಷಿತಾ ವಂದಿಸಿದರು, ತುಳು ಪೀಠದ ಪ್ರಸಾದ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ