ಸ್ತ್ರೀ ಎಂದರೆ ನಿನಗಿಷ್ಟು ಸಾಕೆ

Upayuktha
0

ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.



ದು ಪ್ರಖ್ಯಾತ ಕನ್ನಡ ಕವಿಯ ಪದ್ಯದ ಸಾಲು "ಸ್ತ್ರೀ. ಎಂದರೆ ಇಷ್ಟೇ ಸಾಕೆ" ಇದು ಜಗತ್ತಿನ ಶೇ.49ರಷ್ಟು ಇರುವ ಮಹಿಳೆಯ ಮಹತ್ತ್ವವನ್ನು ಎತ್ತಿ ಹಿಡಿಯುತ್ತದೆ. ವಿಶ್ವ ಸಂಸ್ಥೆಯು 1975 ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ನಿರ್ಣಯದಂತೆ ಪ್ರತಿ ವರ್ಷವೂ ಮಾರ್ಚ್ 8ರಂದು ಮಹಿಳಾ ದಿನಾಚರಣೆ ವಿಶ್ವದ ಎಲ್ಲಡೆ ಆಚರಿಸಲಾಗುತ್ತಿದೆ.


ಮಹಿಳೆ ಕೇವಲ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕೆ ಮಾತ್ರ ಸೀಮಿತವಲ್ಲ. ಅವಳು ಮಾನವ ಜನಾಂಗದ ಅವಿಭಾಜ್ಯ ಅಂಗವಾಗಿ ಇದ್ದಾಳೆ. ಕುಡುಕ ಗಂಡನ ಜೊತೆ ಜೀವನ ಕಳೆಯುತ್ತಾ ಮಕ್ಕಳನ್ನು ಓದಿಸಿ ಒಳ್ಳೆಯ ದಾರಿಗೆ ಹಚ್ಚಿ ಮನೆಯನ್ನು ಎತ್ತಿ ಹಿಡಿವ ಮಹಿಳೆ ಯಾವ ಕಾರ್ಪೊರೇಟ್ ಸಿಇಒಗೆ ಏನು ಕಡಿಮೆಯಿಲ್ಲ.

 

ಹೆಣ್ಣು ಮನೆಯ ಕಣ್ಣು ಎನ್ನುವಂತೆ ಎಲ್ಲ ತರಹದ ಅವಮಾನಗಳನ್ನು, ದೌರ್ಜನ್ಯ, ಸಹಿಸಿ ಗಂಧದಂತೆ ತನ್ನ ಜೀವನವನ್ನು ತೀಡಿ ಇಡೀ ಕುಟುಂಬವನ್ನು ಮುನ್ನಡೆಗೆ ತರುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಈಗಲೂ ಎರಡನೇ ದರ್ಜೆಯ ನಾಗರೀಕ ಎನ್ನುವಂತೆ ನೋಡಲಾಗುತ್ತಿದೆ. ಈಗಲೂ "ಹೆಣ್ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ" ಎಂದು ವ್ಯಂಗ್ಯ ಮಾಡಲಾಗುತ್ತಿದೆ. 


ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ,ಅವಳ ಮದುವೆಗೆ ಎಂದು ಎಲ್ಐಸಿ ಪಾಲಿಸಿ ಮಾಡಿಸಲು ಓಡಾಡುತ್ತಾರೆಯೇ ವಿನಃ ಅವಳ. ಉನ್ನತ ಶಿಕ್ಷಣದ ಬಗ್ಗೆ  ತಲೆ. ಕೆಡಿಸಿ ಕೊಳ್ಳುವುದಿಲ್ಲ. ಕಾಡುವ ದೇವರ ಕಾಟ ಕಳೆದ. ಹಾಗೆ ಅವಳ ಡಿಗ್ರಿ ಕೊನೆಯ ವರ್ಷದಲ್ಲಿ ಇರುವಾಗಲೇ ವರ ನೋಡಲು ಶುರು ಮಾಡುತ್ತಾರೆ. ಮದುವೆ ಮಾಡಿ ಕೈ ತೊಳೆದು ಕೊಳ್ಳುವ ಹಾಗೆ ಮಾಡುತ್ತಾರೆ ವಿನಃ ಅವಳ ಮುಂದಿನ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.


ಹುಟ್ಟಿನಿಂದಲೇ ಮಾತು ಮಾತಿಗೂ ಅವಳ ಗಂಡನ ಮನೆಯಲ್ಲಿ ಹೇಗಿರಬ್ಬೇಕು ಎನ್ನುವ ಬಗ್ಗ ಟ್ರೈನಿಂಗ್ ಕೊಡಲು ನೋಡುತ್ತಾರೆ ವಿನಃ ನಿನ್ನ ವ್ಯಕ್ತಿತ್ವ ರೂಪಿಸಿಕೊ ಎಂದು ಒಬ್ಬ ತಂದೆ ತಾಯಿಯೂ ಹೇಳುವುದಿಲ್ಲ. ಮದುವೆ ಆದರೆ ನಿನ್ನ ಅರ್ಧ ಜೀವನ ಸಾರ್ಥಕವಾಯಿತು, ಮಗು ಹೆತ್ತರೆ ನಿನ್ನ ಜೀವನ ಪೂರ್ಣವಾಯಿತು ಎಂದು ಬ್ರೈನ್ವಾಷ್ ಮಾಡುತ್ತಾರೆಯೇ ವಿನಃ ಅದರ  ಆಚೆಗೂ ಜೀವನವಿದೆ ಎಂದು ಯಾರು ಯೋಚಿಸುವುದಿಲ್ಲ. ಈಗಲೂ  ಸಮಾಜದಲ್ಲಿ ಅವಿವಾಹಿತ ಮಹಿಳೆ ಒಂದುರೀತಿಯ ವ್ಯಂಗ್ಯಕ್ಕೆ ಒಳಗಾಗುವುದನ್ನು ನೋಡಬಹುದು. ಜಯಲಲಿತಾ, ಲತಾ ಮಂಗೇಶ್ಕರ್, ಮಮತಾ ಬ್ಯಾನರ್ಜಿ ಮುಂತಾದ ಸಾಧಕರು ಅವರ ಕಣ್ಣಿಗೆ ಕಾಣುವುದಿಲ್ಲ.


ಮದುವೆಯಾಗಿ ಬಂದ ಸೊಸೆಗೆ ಮಗು ಆಗದಿದ್ದರೆ, ಅವಳಿಗೆ ನೂರೆಂಟು ಹರಕೆ, ವ್ರತ ಮಾಡಲು ಹೇಳುತ್ತಾರೆಯೇ ವಿನಃ ತನ್ನ ಮಗನಿಗ ಟೆಸ್ಟ್ ಮಾಡಿಸು ಎಂದು ಯಾವ ತಾಯಿಯೂ ಹೇಳುವುದಿಲ್ಲ. ಇದು ತಾಯ್ತನವನ್ನು ಹೆಣ್ಣಿನ ತಲೆಗೆ ಕಟ್ಟುವ ಪರಿ. ಇದು ಒಂದು ರೀತಿಯ escapism ಕೂಡ ಹೌದು.


ಈಗಲೂ ಸಮಾಜದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇ 21ರಷ್ಟು ಮಾತ್ರ. ಇನ್ನು ಪಿಎಚ್.ಡಿ ಮಾಡುವವರ ಸಂಖ್ಯೆ ಶೇ.6ರಷ್ಟು ಮಾತ್ರ. ಎಲ್ಲಿ ತನ್ನ ಸೊಸೆ ತನ್ನ ಮಗನನ್ನು ಮೀರಿಸಿ ನಿಲ್ಲುತ್ತಾಳೆ ಎನ್ನುವ. ಭಯ ಬಹುತೇಕ ಮಗನನ್ನು ಹೆತ್ತ ತಾಯಂದಿರು ಅನುಭವಿಸುತ್ತಾರೆ. ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ಪ್ರೂವ್ ಆಗಿ ಬಿಡುತ್ತದೆ.


ಆದರೆ ಆಧುನಿಕತೆಯಿಂದ ಹೆಣ್ಣು ಹೋರಾಟದಿಂದ ಅವಕಾಶಗಳನ್ನು ಬಳಸಿಕೊಂಡು ಮುಂದೆ ಹೋಗುತ್ತಿದ್ದಾಳೆ. ಚಿಕ್ಕ ಅವಕಾಶದಿಂದ ಹಿಡಿದು ಬಾಹ್ಯಾಕಾಶ ಮುಟ್ಟಿ ಬರುವ ಎಲ್ಲ ಸಾಧನೆಗಳನ್ನು ಮಾಡುತ್ತಿದ್ದಾಳೆ.


ಬಾಲ್ಯ ವಿವಾಹ, ಸತಿ ಪದ್ಧತಿ, ವರದಕ್ಷಿಣೆ ಮುಂತಾದ ಪಿಡುಗಿನಿಂದ ಹೊರ ಬಂದು ತನ್ನ ಸಾಧನೆಯನ್ನು ತೋರಿಸುತ್ತಿದ್ದಾಳೆ. ಇಂದಿರಾ ಗಾಂಧಿ, ಕಿರಣ್‌ ಮುಜುಂದಾರ್, ಕಿರಣ್ ಬೇಡಿ, ಇಂದ್ರಾ ನೂಯಿ, ಸುಷ್ಮಾ ಸ್ವರಾಜ್ ಮುಂತಾದವರು ಆಗಸದಲ್ಲಿ ಮಿನುಗಿದ ನಕ್ಷತಗಳೆಂದು ಹೇಳಬಹುದು.


ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂಬ ಕುಹಕದ ನುಡಿಯಿಂದ ಪಾರಾಗಿ ಯಶಸ್ಸಿನ ಹೆಜ್ಜೆ ಇಟ್ಟರೆ ಮಹಿಳಾ ದಿನಾಚರಣೆ ಆಚರಣೆ ಸಾರ್ಥಕ.

ಏನಂತೀರಾ? 

ಮತ್ತೊಮ್ಮೆ ಮಹಿಳಾ ದಿನಾಚರಣೆಯ ಶುಭಾಶಯಗಳು.


- ಗಾಯತ್ರಿ ಸುಂಕದ, ಬದಾಮಿ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top