ಐಡ್ಸ್ ಆಫ್ ಮಾರ್ಚ್: ಏನಿದು?

Upayuktha
0
ರಾಜಕಾರಣದಲ್ಲಿ ಮಿತ್ರದ್ರೋಹ ಸಾರ್ವಕಾಲಿಕ



Ides of March. ಇಂಗ್ಲಿಷ್ ಬಲ್ಲವರು ಮರೆಯಲಾಗದ ಪದಪುಂಜ. ಕ್ರಿ.ಪೂ. 44 ಮಾರ್ಚ್ 15 ರೋಮ್ ಇತಿಹಾಸದಲ್ಲಿ ಮರೆಯಲಾಗದ ದಿನ. ಜೂಲಿಯಸ್ ಸೀಸರ್ (ಕ್ರಿ. ಪೂ. 12 ಜುಲೈ 100- 15 ಮಾರ್ಚ್ 44) ಹತ್ಯೆಯಾದ ದಿನ. ಪ್ರಾಚೀನ ರೋಮನ್ ಚಾಂದ್ರಮಾನ ಕ್ಯಾಲೆಂಡರ್ ಮಾರ್ಚ್ ನಿಂದ ಆರಂಭ. ಈ ಮಾಸದ ಪೌರ್ಣಿಮೆ ಗುರು ಗ್ರಹಕ್ಕೆ ಮೀಸಲಾದ ದಿನ. ಪ್ರತಿ ಮಾಸದ 15 (ಐಡ್ಸ್) ರೋಮನ್ ರಾ ಅಧಿದೇವತೆ ಜುಪಿಟರ್ ಅಂದರೆ ಗುರುವಿಗೆ ಪವಿತ್ರವಾದದ್ದು.


ಸಿಸೇರಿಯನ್ ಹೆರಿಗೆ ಈಗಲೂ ಪ್ರಚಲಿತ. ಶಿಶು ಜನನ ಕಾಲದಲ್ಲಿ ತಾಯಿ ಮರಣ ಪ್ರಮಾಣ ಹೆಚ್ಚಿ ಆಯಾ ಕಾಲದಲ್ಲಿ ಸೀಸರ್ ನ ತಾಯಿ ಅನೇಕ ವರ್ಷ ಜೀವಿಸಿದ್ದರಂತೆ. ಸೀಸರ್ ನದು ಈಜಿಪ್ಟ್ ಸೇರಿದಂತೆ ಯುರೋಪ್‌ನಲ್ಲೂ ವಿಸ್ತರಿಸಿದ ರೋಮನ್ ಪ್ರಭುತ್ವ.


'ಆಜೀವ ಪರ್ಯಂತ ಸರ್ವಾಧಿಕಾರಿ' ಎಂದು ಘೋಷಣೆಯಾದ ಸಂದರ್ಭದಲ್ಲಿ ಅವನ ಮಹತ್ವಾಕಾಂಕ್ಷೆ ಮತ್ತು ಸರ್ವಾಧಿಕಾರವನ್ನು ಒಪ್ಪದ ಕೆಲವೇ ಸೆನೆಟರ್ ಗಳಿಂದ ಸೆನೆಟ್ ಸಭಾಂಗಣದಲ್ಲಿಯೇ ಸೀಸರ್ ನ ಹತ್ಯೆ. ತನ್ನ ಒಂದು ಕಾಲದ ಮಿತ್ರ ಬ್ರೂಟಸ್ 23 ಬಾರಿ ಇರಿದಾಗ ಅವನಿಂದ ಬಂದ ಉದ್ಗಾರ 'ಬ್ರೂಟಸ್, ನೀನೂ ಸಹ?'


ಮಿತ್ರ ದ್ರೋಹ ರಾಜಕಾರಣಕ್ಕೆ ಒಂದು ಶಾಶ್ವತ ಉದಾಹರಣೆ. ಅದನ್ನು ನೆನಪಿಸಿಕೊಳ್ಳುವ ದಿನವಿದು. ತುರ್ತು ಪರಿಸ್ಥಿತಿ ನಂತರ ಜನತಾ ಪಕ್ಷ ರಚನೆಯಾಗಿ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ (24 ಮಾರ್ಚ್ 77- 28 ಜುಲೈ 79) ರಾಜಿನಾಮೆ ನೀಡಿ ಬೇಕಾಗಿ ಬಂದ ಮಿತ್ರ ದ್ರೋಹದ ಪ್ರಸಂಗವನ್ನು ಆಧರಿಸಿ ಗಂಗೋತ್ರಿ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳು Julius Caesar- a contemporary version ಅನ್ನುವ ನಾಟಕ ಪ್ರದರ್ಶಿಸಿದ್ದು, ಮುಂದುವರೆದ ನಮ್ಮ ರಾಜಕೀಯದ ಗತಿಬಿಂಬ!


ಇಂಗ್ಲಿಷ್ ನಾಟಕಕಾರ ಶೇಕ್ಸ್‌ಪಿಯರ್ 1599 ರಲ್ಲಿ ರಚಿಸಿದ 'ಜೂಲಿಯಸ್ ಸೀಸರ್' ನಲ್ಲಿ ಜೀವನದ ಅನೇಕ ಒಳ ಸುಳಿವುಗಳಿವೆ ಮತ್ತು ಇಂದಿಗೂ ಪ್ರಸ್ತುತ ಅನ್ನಿಸುತ್ತದೆ.

ಸೀಸರ್ ನ ಮಡದಿ ಸಂಶಯಾತೀತವಾಗಿರಬೇಕು,ಪ್ರತಿಯೊಬ್ಬರೂ ಬಯಸುವುದು ಅನಿರೀಕ್ಷಿತ ಸಾವನ್ನೇ ಮನುಷ್ಯ ಮಾಡಿದ ತಪ್ಪುಗಳು ಅವನ ಸಾವಿನ ನಂತರವೂ ಉಳಿದಿರುತ್ತವೆ. ಒಳ್ಳೆಯದು ಅವನೊಂದಿಗೆ ಮಣ್ಣು ಸೇರುತ್ತವೆ. ತಪ್ಪು ನಮ್ಮ ನಕ್ಷತ್ರ (ಸ್ಟಾರ್) ಗಳದ್ದಲ್ಲ, ನಮ್ಮದು.


ಹೇಡಿಗಳು ತಮ್ಮ ಸಾವಿಗೂ ಮುನ್ನ ಅನೇಕ ಸಲ ಸತ್ತಿರುತ್ತಾರೆ ನಾನು ಬಂದೆ ನೋಡಿದೆ. ಗೆದ್ದೆ ಮೊದಲಾದ ಹೇಳಿಕೆಗಳು ಎಲ್ಲಾ ಸಂದರ್ಭ ಕಾಲಕ್ಕೂ ಅನ್ವಯ ಅನಿಸುತ್ತದೆ.


- ಡಾ. ಹೆಚ್.ಎಸ್ ಸುರೇಶ್

9448027400

ಅಹಲ್ಯಾನಗರ, ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top