ಆಧ್ಯಾತ್ಮಿಕ ಸಾಧನೆಯಿಂದಲೇ ಮಾನವ ಜನ್ಮ ಸಾರ್ಥಕ: ಪ್ರಸನ್ನಾಚಾರ್

Chandrashekhara Kulamarva
0

 


ಬಳ್ಳಾರಿ: ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡು ಮಾನವ ಜನ್ಮ ಸಾರ್ಥಕ ಮಾಡುಕೊಬೇಕೆಂದು ರಾಯರ ಮಠದ ವ್ಯವಸ್ಥಾಪಕ ಪ್ರಸನ್ನಾಚಾರ್ ತಿಳಿಸಿದರು.  ಶನಿವಾರ ಸಂಜೆ ಸತ್ಯನಾರಾಯಣ ಪೇಟೆ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 404ನೆ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಲಾವಿದರ ವತಿಯಿಂದ ನಡೆದ ರಾಘವೇಂದ್ರ ಸಾಂಸ್ಕೃತಿಕ ಸಂಭ್ರಮ 2025 ಕಾರ್ಯಕ್ರಮ ವನ್ನು ಪ್ರಾರಂಭಿಸಿ ಮಾತಾಡಿದರು. 


ನಂತರ ವಸುಂಧರ ತಂಡದ ಶಾಸ್ತ್ರೀಯ ನೃತ್ಯ ಪ್ರದರ್ಶನ, ವೈಷ್ಣವಿ ತಂಡದ ಸಮೂಹ ನೃತ್ಯ, ವಿಜಯಲಕ್ಷ್ಮಿ ತಂಡದ ಶಾಸ್ತ್ರೀಯ ಸಂಗೀತ, ವಿದ್ಯಾರಘುನಾಥ್ ತಂಡದ ಭಕ್ತಿಗೀತೆ ಗಾಯನ ಭಕ್ತರನ್ನು ರಂಜಿಸಿತು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ ಮಾಡಲಾಯಿತು. ವೇದ ಪಂಡಿತರು ಪ್ರಸನ್ನಾಚಾರ್ ಅವರಿಗೆ ತುಂಗಾ ವೇದಪಂಡಿತ ರತ್ನ ಪ್ರಶಸ್ತಿ, ನೃತ್ಯ ಕಲಾವಿದರಾದ ವೈಷ್ಣವಿ, ಅನನ್ಯ, ಹರಿಣಿ, ವೆದಾಶ್ರಿಗೆ ತುಂಗಾ ನಾಟ್ಯ ರವಳಿ ಪ್ರಶಸ್ತಿ, ರಾಧಾಕೃಷ್ಣಗೆ ತುಂಗಾ ನಾಟ್ಯ ರತ್ನ.. ಚಿಟ್ಟಿಬೊಟ್ಲ ಶ್ರೀಧರ್ ಅವರಿಗೆ ತುಂಗಾ ಕಲಾ ಪೋಷಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಲಾಯಿತು.


ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಂಗಕಲಾ ವಿದರು ಟಿ.ನಾಗಭೂಷಣ್, ಶಿವರುದ್ರಯ್ಯ, ಭೀಮರಾವ್, ಕೃಷ್ಣಚಾರ್, ಪವಮಾನ ಅರಳಿಕಟ್ಟಿ, ಪದ್ಮಾ, ರಾಮರಾವ್, ವಿಠ್ಠಲ್ ದೇಸಾಯಿ, ರಘುನಾಥ್, ವೇದಾ, ರಾಘವಿ, ಗಾಯತ್ರಿ, ಗೋಪಿನಾಥ್ ಶರ್ಮ, ವಿಜಯಲಕ್ಷ್ಮಿ ಕುಲಕರ್ಣಿ, ಮಠದ ಸಿಬ್ಬಂದಿ..ಕಲಾವಿದರು, ಭಕ್ತರು ಮುಂತಾದವರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top