ಬೆಂಗಳೂರು; ರಾಯರ ಸನ್ನಿಧಿಗೆ ಭಕ್ತಜನಸಾಗರ

Upayuktha
0

ಶ್ರೀ ರಾಘವೇಂದ್ರತೀರ್ಥ  ಗುರುಸಾರ್ವಭೌಮರ 430ನೇ ಜನ್ಮದಿನೋತ್ಸವ "ಲಕ್ಷ ಪುಷ್ಪಾರ್ಚನೆ" 


ಬೆಂಗಳೂರು : ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ  ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಅಂಗವಾಗಿ ಗುರುರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮತ್ತು ವಿಶೇಷವಾಗಿ "ಲಕ್ಷ ಪುಷ್ಪಾರ್ಚನೆ"ಯನ್ನು  ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ, ಮಠದ ಧರ್ಮಾಧಿಕಾರಿಗಳಾದ ಕೃಷ್ಣ ಗುಂಡಾಚಾರ್ಯರು ಮತ್ತು ಅರ್ಚಕರಾದ  ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ವೃಂದದಿಂದ "ಪುಷ್ಪಾರ್ಚನೆ" ನೆರವೇರಿತು.ಶ್ರೀಮಠದ ಪುರೋಹಿತರಾದ ನಂದಕಿಶೋರಾಚಾರ್ಯರು ತಿಳಿಸಿದರು. 


ತದನಂತರ ಡಾ|| ವೆಂಕಟನರಸಿಂಹಾಚಾರ್ಯರಿಂದ "ಶ್ರೀ ರಾಘವೇಂದ್ರ ವಿಜಯ" ಪ್ರವಚನದ ಮಂಗಳ ಕಾರ್ಯಕ್ರಮದೊಂದಿಗೆ ಸ್ವರ್ಣ ಸಿಂಹಾಸನದಲ್ಲಿ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಶ್ರೀಮಠದಿಂದ ಗುರು ಪಾದಪೂಜೆ, ಕನಕಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ನೆರವೇರಿತು. 


ಈ ಉತ್ಸವದಲ್ಲಿ ವಿಶೇಷ ಚೆಂಡೆ ವಾದನ ಆಕರ್ಷಣೀಯವಾಗಿತ್ತು. ಸೇವಾ ಕರ್ತೃಗಳಿಗೆ ಮತ್ತು ಭಕ್ತರಿಗೆ ಸಂಕಲ್ಪವನ್ನು ಮಾಡಿಸಿ  ಶೇಷವಸ್ತ್ರ ಗುರು ರಾಯರ ಪಾದುಕೆ, ಫಲ ಮಂತ್ರಾಕ್ಷತೆ ಪ್ರಸಾದ ರೂಪವಾಗಿ ಕೊಡಲಾಯಿತು. ಇದೇ  ಸಂದರ್ಭದಲ್ಲಿ ರಾಯರ ಸನ್ನಿಧಿಗೆ ಆಗಮಿಸಿದ ಸುಮಾರು 20,000ಕ್ಕೂ ಮಿಗಿಲಾಗಿ ಭಕ್ತರಿಗೆ ವಿಶೇಷವಾಗಿ ಅನ್ನಸಂತರ್ಪಣೆಯ ಪ್ರಸಾದ ಕಾರ್ಯಕ್ರಮವು ಸ್ವಯಂಸೇವಕರ ಮತ್ತು ಸಿಬ್ಬಂದಿಗಳ ಸಹಕಾರದಿಂದ  ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನೆರವೇರಿತು. 


ಸೇವಾ ಕರ್ತೃಗಳು, ಚಿತ್ರನಟಿ ಪ್ರೇಮಾ, ರಿಪಬ್ಲಿಕ್ ಕನ್ನಡ ವಾಹಿನಿಯ ವಾರ್ತಾ ನಿರೂಪಕರಾದ ಶ್ರೀಪಾದ ಪಾಟೀಲ್  ಮುಂತಾದ ಗಣ್ಯರೊಂದಿಗೆ ಭಕ್ತರು, ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆಯನ್ನು  ಸ್ವೀಕರಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top