ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಿಜಯನಗರದ ಮಾಧ್ವ ಸಂಘದಲ್ಲಿ ಮಾರ್ಚ್ 11 ರಿಂದ 14ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಭಜನಾ ಕಾರ್ಯಕ್ರಮ : ಪ್ರತಿದಿನ ಸಂಜೆ 5-30ಕ್ಕೆ. ಮಾರ್ಚ್ 11- ವಿಜಯನಗರದ ಪವಿತ್ರ ಗಾನ ವೃಂದ, ಮಾರ್ಚ್ 12-ಅಮರಜ್ಯೋತಿನಗರದ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ, ಮಾರ್ಚ್ 13-ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ : ಮಾರ್ಚ್ 11 ರಿಂದ 13, ಪ್ರತಿದಿನ ಸಂಜೆ 6-30ಕ್ಕೆ. ಪ್ರವಚನಕಾರರು : ಡಾ|| ವೆಂಕಟೇಶ್ ಆಚಾರ್ಯ. ವಿಷಯ : " ಮಾರ್ಕಂಡೇಯ ಪುರಾಣ".
ಹರಿನಾಮ ಸಂಕೀರ್ತನೆ : ಮಾರ್ಚ್ 14, ಶುಕ್ರವಾರ ಸಂಜೆ 6-00 ಗಂಟೆಗೆ. ಗಾಯನ : ಪ್ರಾಣೇಶ್ ಪಿ. ಭಾರಧ್ವಾಜ್ ಮತ್ತು ಕೌಶಿಕ್. ಕೀ-ಬೋರ್ಡ್ : ಅಮಿತ್ ಶರ್ಮಾ, ತಬಲಾ : ಶ್ರೀನಿವಾಸ ಕಾಖಂಡಕಿ.
ಕಾರ್ಯಕ್ರಮ ನಡೆಯುವ ಸ್ಥಳ : ವಿಜಯ ಮಧ್ವ ಸಂಘ , #37/2, ಗಂಗಾಧರ ಬಡಾವಣೆ,2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು - 560 040.
ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ