ಬೆಂಗಳೂರು : ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 13ರ ವರೆಗೆ ಶ್ರೀರಾಮನವಮಿ ಉತ್ಸವವನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಪೂಜಾ ಕೈಂಕರ್ಯಗಳು : ಮಾರ್ಚ್ 30, ಬೆಳಗ್ಗೆ 7 ರಿಂದ 12ರ ವರೆಗೆ ಸೂರ್ಯ ನಮಸ್ಕಾರ, ರಾಮಾಯಣ ಪಾರಾಯಣ, ಶ್ರೀ ರಾಮ ದೇವರಿಗೆ ಪೂಜೆ, ನಂತರ ತೀರ್ಥ ಪ್ರಸಾದ ವಿನಿಯೋಗ, ಸಂಜೆ 5-30ಕ್ಕೆ ಶ್ರೀ ವಿನಯ್ ಶರ್ಮಾ ಅವರಿಂದ ವಿಶ್ವಾವಸು ನಾಮ ಸಂವತ್ಸರದ ಪಂಚಾಗ ಶ್ರವಣ,
ಕಾರ್ಯಕ್ರಮದ ಉದ್ಘಾಟನೆ : ಮಲ್ಲೇಶ್ವರಂ ಶಾಸಕರಾದ ಡಾ|| ಸಿ.ಎನ್. ಅಶ್ವತ್ ನಾರಾಯಣ. ಏಪ್ರಿಲ್ 6 ರಂದು ಶ್ರೀರಾಮ ನವಮಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ತೊಟ್ಟಿಲು ಸೇವೆ, ಪಾನಕ ಸೇವೆ, ಏಪ್ರಿಲ್ 13 ರಂದು ಬೆಳಗ್ಗೆ 10 ರಿಂದ 1ರ ವರೆಗೆ ಶ್ರೀರಾಮ ಪಟ್ಟಾಭಿಷೇಕ, ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಸಂಜೆ 7-00ಕ್ಕೆ ಪ್ರಾಕಾರೋತ್ಸವ.
ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-30ಕ್ಕೆ). ಮಾರ್ಚ್ 30-ಕು|| ರಚನಾ ಶರ್ಮಾ ಮತ್ತು ಸಂಗಡಿಗರಿಂದ ಗಾಯನ, ಮಾರ್ಚ್ 31-ಎಂ.ಎಸ್. ಗೋವಿಂದಸ್ವಾಮಿ ಮತ್ತು ಎಂ.ಎಸ್.ಜಿ. ಉಮಾ ಶಂಕರ್ ಇವರಿಂದ ದ್ವಂದ್ವ ಪಿಟೀಲು ವಾದನ, ಏಪ್ರಿಲ್ 1-ಸಿ. ಅಶ್ವಿನಿ ಮತ್ತು ಎಂ.ಎಸ್.ಜಿ. ಸರ್ವಮಂಗಳ ಇವರಿಂದ ಯುಗಳ ಗಾಯನ, ಏಪ್ರಿಲ್ 2-ಕಲಾಕ್ಷಿತಿ ಸ್ಕೂಲ್ ಆಫ್ ಫೈನ್ ಆರ್ಟ್ಸ್ ತಂಡದವರಿಂದ ಭರತನಾಟ್ಯ, ಏಪ್ರಿಲ್ 3-ರೂಪಾ ಗಿರೀಶ್ ಅವರ ನಿರ್ದೇಶನದಲ್ಲಿ ನೃತ್ಯ ಲಹರಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ, ಏಪ್ರಿಲ್ 4-ಮಧುರ ಮತ್ತು ಸಂಗಡಿಗರಿಂದ ಗಾಯನ.
ಏಪ್ರಿಲ್ 5-ಸನಕ ಕಲಾ ಶಾಲೆ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಏಪ್ರಿಲ್ 6- ವತ್ಸಲಾ ರಾವ್ ಅವರ ಸ್ತುತಿ ವಾಹಿನಿ ತಂಡದವರಿಂದ ಭಕ್ತಿ ಸಂಗೀತ, ಏಪ್ರಿಲ್ 7-ಎಸ್. ಶಶಿಧರ್, ಜಯಶ್ರೀ ಬಾಲಾಜಿ, ಆದಿತ್ಯ ಬಾಲಾಜಿ ಇವರಿಂದ ಪಿಟೀಲು ತ್ರಯ, ಏಪ್ರಿಲ್ 8-ಬಿ.ಎಸ್. ಆನಂದ್ ಮತ್ತು ಸಂಗಡಿಗರಿಂದ ಗಾಯನ, ಏಪ್ರಿಲ್ 9-ಕು|| ವಾಣಿಶ್ರೀ ರಾಮಕೃಷ್ಣ, ಮೈತ್ರಿ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ, ಏಪ್ರಿಲ್ 10-ಪಟ್ಟಾಭಿರಾಮ ಪಂಡಿತ್ ಮತ್ತು ಸಂಗಡಿಗರಿಂದ ಗಾಯನ, ಏಪ್ರಿಲ್ 11-ಸಂಧ್ಯಾ ಶ್ರೀನಾಥ್, ಸುಮಲತಾ ಮಂಜುನಾಥ್ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ, ಏಪ್ರಿಲ್ 12-ರುದ್ರಪಟ್ಟಣಂ ಸಹೋದರರಾದ ಆರ್.ಎನ್. ತ್ಯಾಗರಾಜನ್, ಆರ್.ಎನ್. ತಾರಾನಾಥನ್ ಮತ್ತು ಸಂಗಡಿಗರಿಂದ ಯುಗಳ ಗಾಯನ.
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀರಾಮ ಕೃಪೆಗೆ ಪಾತ್ರರಾಗಬೇಕೆಂದು ಗೌರವ ಕಾರ್ಯದರ್ಶಿಗಳಾದ ಸಿ. ಚಂದ್ರಶೇಖರ್ ವಿನಂತಿಸಿದ್ದಾರೆ.
ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ