ಸಿರುಗುಪ್ಪ: ತಾಲೂಕಿನ ಮಾಟಸಗೂರು ಗ್ರಾಮದ ಶ್ರೀ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅವರು ಶ್ರೀ ಈಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಗೊಳಿಸಿದ 2 ಲಕ್ಷ ಮೊತ್ತದ ಡಿಡಿ ಯನ್ನು ದೇವಸ್ಥಾನ ಸಮಿತಿಗೆ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಶ್ರೀ ಈಶ್ವರ ದೇವಸ್ಥಾನವು ಒಳ್ಳೆಯ ವಾಸ್ತುಶಿಲ್ಪದೊಂದಿಗೆ ರಚನೆಯಾಗುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ಮೊತ್ತ ಮಂಜೂರಾಗಿದ್ದು ಈ ದಿನ ಸಮಿತಿಗೆ ಹಸ್ತಾಂತರ ಮಾಡಿದ್ದಾರೆ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಧ್ಯಾತ್ಮಿಕ ಚಿಂತನೆ ಒಳಗೊಂಡ ಭಜನಾ ಕಮ್ಮಟ, ಸರ್ವಧರ್ಮ ಸಮ್ಮೇಳನ ನೆಡೆದು ಕೊಂಡು ಬರುತ್ತಿದ್ದು , ಇದೆ ಮೇ ತಿಂಗಳಲ್ಲಿ ಸಾಮೂಹಿಕ ವಿವಾಹ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆರವೇರಲಿದ್ದು. ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕರ ಮಾಶಾಸನ, ಜಲಮಂಗಲ ಕಾರ್ಯಕ್ರಮದ ವಿಶೇಷ ಚೇತನರಿಗೆ ಸಲಕರಣೆ ವಿತರಣೆ ಮಾಡಲಾಗುತ್ತಿದೆ.
ನೆಲ ಜಲ ಸಂರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಕೆರೆ ಹೂಳೆತ್ತುವ ಮೂಲಕ ಜೀವಜಲ ಉಳಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವರೆಗೆ 889 ಕೆರೆ ಪುನಶ್ಚೇತನ ಪೂರ್ಣಗೊಳಿಸಿದ್ದು “1000 “ಕೆರೆಗಳನ್ನು ಪುನಶ್ಚೇತನ ಕಾರ್ಯಕ್ಕೆ ಗುರಿ ಹೊಂದಲಾಗಿದೆ .
ಗ್ರಾಮಗಳಲ್ಲಿ ಜನರು ಸುಖ ಶಾಂತಿ ನೆಮ್ಮದಿಯಿಂದ ಜೀವನ ನೆಡೆಸಲು ದೇವಸ್ಥಾನಗಳು ಮುಖ್ಯ ಪಾತ್ರ ವಹಿಸುತ್ತವೆ. ಧಾರ್ಮಿಕ ಶ್ರದ್ದಾ ಕೇಂದ್ರಗಳು ಹಾಗೂ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಈಶ್ವರ ಸ್ವಾಮಿಯ ದೇವಸ್ಥಾನ ಇನ್ನಷ್ಟು ಉತ್ತಮ ರೀತಿಯಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿ ಗ್ರಾಮದಲ್ಲಿ ಮಳೆ, ಬೆಳೆ ಜನರ ಜೀವನ ಸಮೃದ್ಧಮಯವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರ್, ದೇವಸ್ಥಾನ ಅಭಿವೃದ್ಧಿಯ ಸಮಿತಿಯ ಗೌರವ ಅಧ್ಯಕ್ಷ ಶಾಂತಕುಮಾರ್, ಅಧ್ಯಕ್ಷ ಪಂಪಯ್ಯ ಸ್ವಾಮಿ, ಕಾರ್ಯದರ್ಶಿ ಈಶ್ವರಯ್ಯ ಸ್ವಾಮಿ ಹಾಗೂ ಮುಖಂಡರಾದ ಪಂಪನಗೌಡ್ರು, ಹೊಸಮನಿ ವೀರಭದ್ರಪ್ಪ, ವಲಯ ಮೇಲ್ವಿಚಾರಕ ಪ್ರಬಯ್ಯಾ, ಸೇವಾ ಪ್ರತಿನಿಧಿ ರಾಜೇಶ್ವರಿ, ಸಿ.ಎಸ್.ಸಿ ಸೇವಾದಾರ ಚಂದ್ರು ಹಾಗೂ ಸಾರ್ವಜನಿಕರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ