ಬಲರಾಮ ಮತ್ತು ಪ್ರಸೂತಿ ವಿಜ್ಞಾನ

Upayuktha
0



ಲರಾಮ ಕೃಷ್ಣನ ಅಣ್ಣನೆಂದು ನಮಗೆಲ್ಲರಿಗೂ ಗೊತ್ತು. ಆದರೆ ಬಲರಾಮನ ಹುಟ್ಟಿನ ಬಗ್ಗೆ ಕೆಲವರಿಗಷ್ಟೇ ಗೊತ್ತು. ಅದೇನೆಂದು ನೋಡುವ. ಕಂಸನು, ದೇವಕಿ ಮತ್ತು ವಸುದೇವರ ಎಂಟನೇ ಮಗುವಿನಿಂದ ತನಗೆ ಸಾವು ಎಂದು  ಅಶರೀರ ವಾಣಿಯ ಮೂಲಕ ತಿಳಿದು ಅವರನ್ನು ಸೆರೆಮನೆಯಲ್ಲಿಟ್ಟಿದ್ದನು. ಅಲ್ಲಿ ದೇವಕಿಯ ಗರ್ಭದಲ್ಲಿ ಉದಿಸಿದ ಆರು ಶಿಶುಗಳನ್ನು ಕಂಸನು ಕೊಂದು ಹಾಕಿದನು. ಮತ್ತೆ ಏಳನೇ ಬಾರಿ ದೇವಕಿ ಗರ್ಭ ಧರಿಸಿದಳು. ಆ ಗರ್ಭಕ್ಕೆ ಆರು ತಿಂಗಳಾಯಿತು. ಆಗ ವಿಷ್ಣು ಯೋಗಮಾಯೆಯನ್ನು ಕರೆದು ದೇವಕಿಯ ಗರ್ಭದಲ್ಲಿರುವ ಆ ಭ್ರೂಣವನ್ನು ಹೊರ ತೆಗೆದು ವಸುದೇವನ ಇನ್ನೊಬ್ಬ ಪತ್ನಿಯಾದ ರೋಹಿಣಿಯ ಗರ್ಭದೊಳಗೆ ಇಡಲು ಸೂಚಿಸಿದನು.


ಹೀಗೆ ದೇವಕಿಯ ಹೊಟ್ಟೆಯಲ್ಲಿ ಆರು ತಿಂಗಳು ವಾಸವಿದ್ದ ಆ ಭ್ರೂಣ ನಂತರ, ಮತ್ತೊಬ್ಬಳು ತಾಯಿಯಾದ ರೋಹಿಣಿಯ ಹೊಟ್ಟೆಯೊಳಗೆ ಬಂದು ಸೇರುತ್ತದೆ. ಆ ಭ್ರೂಣ ಬೆಳೆದು ಜನಿಸಿದ ಮಗುವೇ ಬಲರಾಮ. ಆ ಬಲರಾಮನ ಇನ್ನೊಂದು ಹೆಸರು ಸಂಘರ್ಷಣ. ಸಂಘರ್ಷಣ ಎಂದರೆ ಎಳೆದಿಡಲ್ಪಟ್ಟವನು ಎಂದರ್ಥ.


ಹೀಗೆ ಗರ್ಭವನ್ನು ತೆಗೆದು ಗರ್ಭಕೋಶದಲ್ಲಿಡುವ ಪದ್ಧತಿಯೇ Test Tube Baby ಎಂಬ In Vitro Fertilization (IVF). ಗರ್ಭ ಕೊಳವೆಗಳ ಅಡಚಣೆ ಅಥವಾ ವೀರ್ಯಾಣು ಕೊರತೆ ಇದ್ದರೆ ಅಂತವರ ಭ್ರೂಣವನ್ನೂ ವೀರ್ಯಾಣುವನ್ನೂ ವಿಂಗಡಿಸಿ ತೆಗೆದು, ಸೂಕ್ತ ಪ್ರಯೋಗಶಾಲೆಯಲ್ಲಿ ಭ್ರೂಣವಾಗಿ ಪರಿವರ್ತಿಸಿ, ಅದನ್ನು ತೆಗೆದು ತಾಯಿಯ ಗರ್ಭದೊಳಗೆ ಸೇರಿಸುವುದು ಈ test tube baby ಎಂಬ ಕೃತಕ ಗರ್ಭದಾರಣೆ ವಿಧಾನ. 


ಅದೇ ತಾಯಿಯ ಗರ್ಭಕೋಶ ಬಲಹೀನವಾಗಿದ್ದರೆ, ಉಳಿದ ಅನೇಕ ಕಾರಣಗಳಿಂದ ಸೃಷ್ಟಿಯಾದ ಭ್ರೂಣವನ್ನು ಮತ್ತೊಂದು ಹೆಣ್ಣಿನ ಗರ್ಭಕೋಶಕ್ಕೆ ಬದಲಾಯಿಸುವುದು ಬಾಡಿಗೆತಾಯಿ ಎಂಬ Sarrogacy  ಪದ್ಧತಿ. ಹುಟ್ಟಿನಲ್ಲೇ ಗರ್ಭಕೋಶವಿಲ್ಲದೆಯೋ, ಅಥವಾ ಗರ್ಭಕೋಶ ಸಂಪೂರ್ಣವಾಗಿ ಕಾರ್ಯ ಮಾಡದಿದ್ದರೆ, ಆಗ ಗರ್ಭಕೋಶ ಕಸಿ ಶಸ್ತ್ರಕ್ರಿಯೆ ಅಂದರೆ Uterine Transplantation ಮಾಡುತ್ತಾರೆ. ಈ ಮೂರು ರೀತಿಯಲ್ಲೂ, ಗರ್ಭವನ್ನು ತೆಗೆದಿಡಲು ಸಾಧ್ಯ ಎನ್ನುತ್ತದೆ ಈಗಿನ ವೈದ್ಯಕೀಯ ವಿಜ್ಞಾನ.


Robert Edwards ಮತ್ತು Patrick Steptoe ಎಂಬ ಬ್ರಿಟೀಷ್ ವೈದ್ಯರು ಕಂಡುಹಿಡಿದ test tube baby ಎಂಬ IVF ಪದ್ದತಿ 1978ನೇಯ ಇಸವಿಯಲ್ಲಿ Louise Brown ಎಂಬ ಹೆಣ್ಣು ಮಗು ಜಗತ್ತಿನ ಮೊಟ್ಟಮೊದಲ ಕೃತಕ ಗರ್ಭದಾರಣೆಯ ಮೂಲಕ ಹುಟ್ಟಿದ ಶಿಶು.


ಇಪ್ಪತ್ತನೇಯ ಶತಮಾನದಲ್ಲಿ ಸಾಧ್ಯವಾದ ಈ ಅಪೂರ್ವ ವಿಜ್ಞಾನ, ಪುರಾಣಗಳಲ್ಲಿ ಅಂದೇ ಹೇಳಲ್ಪಟ್ಟಿದೆ ಎಂಬುದೇ ವಿಸ್ಮಯ. ಮೂರರಿಂದ ನಾಲ್ಕು ದಿನದೊಳಗೆ ಗರ್ಭವನ್ನು ಬದಲಾಯಿಸುವ Embryo Transfer ಪದ್ಧತಿ ಮಾತ್ರವೇ ಈಗ ಚಾಲನೆಯಲ್ಲಿದೆ. ಆದರೆ ಬಲರಾಮನ ಕಥೆಯಲ್ಲಿ ಆರು ತಿಂಗಳ ಭ್ರೂಣದ ಗರ್ಭ ಬದಲಾವಣೆ ಹೇಳಿದೆ ಇದೇ ವ್ಯತ್ಯಾಸ. ಮುಂದೆ ಆರು ತಿಂಗಳ ಭ್ರೂಣವನ್ನು ಬದಲಾಯಿಸುವ ತಂತ್ರಜ್ಞಾನ ಬಂದರೆ ಆಶ್ಚರ್ಯ ಪಡಬೇಕಿಲ್ಲ.


ಸಂಘರ್ಷಣ ಎಂದರೆ ಎಳೆದು ಇಡುವುದು. ದೇವಕಿಯ ಹೊಟ್ಟೆಯಲ್ಲಿದ್ದ ಭ್ರೂಣವನ್ನು ರೋಹಿಣಿಯ ಹೊಟ್ಟೆಯೊಳಗೆ ಎಳೆದು ಇಟ್ಟ ಕಾರಣ ಸಂಘರ್ಷಣ ಎಂಬ ಬಲರಾಮ ಹುಟ್ಟಿದ.


- ಸುರೇಶ್ ರಾಜ್ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top