ಪಾಕತಜ್ಞರಿಗೆ ಗೌರವಾರ್ಪಣೆ

Upayuktha
0




ಧರ್ಮತ್ತಡ್ಕ: ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರಗಿದ ಅಷ್ಟಬಂಧ ಬ್ರಹ್ಮಕುಂಭಾಭಿಷೇಕದ ದಿನಗಳಲ್ಲಿ (ದಿನಾಂಕ 27- 01- 2025 ರಿಂದ 04- 02- 2025 ವರೆಗೆ) ನಡೆದ ನಿರಂತರ ಅನ್ನದಾಸೋಹಕ್ಕೆ ತಮ್ಮ ತಂಡದ ಜೊತೆ ಶುಚಿ ರುಚಿಯಾದ ಅಡುಗೆಯನ್ನು ಸೇವಾ ಮನೋಭಾವದಿಂದ ಮಿತವಾದ ವೇತನ ಪಡೆದು ತಯಾರಿಸಿದ ಪಾಕತಜ್ಞ ನೆಲ್ಲಿಕ್ಕಳಯ ಗೋಪಾಲಕೃಷ್ಣ ಭಟ್ ನೆಕ್ಕರೆಕಾಡು ಅವರನ್ನು ಶ್ರೀಕ್ಷೇತ್ರದ  ಮೊಕ್ತೇಸರರಾದ ರವಿಶಂಕರ ಭಟ್ ಎಡಕ್ಕಾನ ಮತ್ತು ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಶಾಲು ಹೊದೆಸಿ, ಫಲಕ ನೀಡಿ ಗೌರವಿಸಿದರು.


ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ದಿನಗಳಲ್ಲಿ ಬೆಳಗ್ಗೆ ಎಂಟು ಗಂಟೆಯಿಂದ ರಾತ್ರಿ ಹನ್ನೆರಡರ ತನಕವೂ ವೈವಿಧ್ಯಮಯ ಅಡುಗೆ, ಊಟ, ಉಪಾಹಾರ, ಲಘು ಉಪಾಹಾರಗಳೊಂದಿಗೆ ಭಕ್ತವೃಂದದ ಉದರ ತಣಿಸಿದ ಎನ್. ಗೋಪಾಲಕೃಷ್ಣ ಭಟ್ ನೆಕ್ಕರೆಕಾಡು ಅವರ ತಂಡದಲ್ಲಿ 14 ಮಂದಿಯಿದ್ದು, ಅವರ ಈ ಅಹರ್ನಿಶಿ ಸೇವೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top